ತಾವರಗೇರಾ: ಪಟ್ಟಣದ ರಾಯನಕೆರೆಗೆ, ಪ್ರತಿ ವರ್ಷ ಮುಂಗಾರು, ಹಿಂಗಾರು ಸಮಯದಲ್ಲಿ ಸುರಿಯುವ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುತ್ತಿಲ್ಲ. ಹಲವು ವರ್ಷಗಳಿಂದ ಹಿನ್ನಿರು ಹರಿದು ಕೆರೆಗೆ ಬರಬೇಕಿದ್ದ ನೀರು ಹಳ್ಳಕ್ಕೆ ಹರಿಯುತ್ತಿದೆ. ಆದರೆ ಕಾಲುವೆಯಲ್ಲಿ ಹೂಳು ಮತ್ತು ಕಸ ಎತ್ತರವಾಗಿ ಬೆಳೆದು ಸ್ವಚ್ಛತೆಯಿಲ್ಲದ ಕಾರಣ, ಕೆರೆಗೆ ನೀರು ಹರಿದು ಹೋಗುತ್ತಿಲ್ಲ. ಆದ್ದರಿಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ಸ್ವಚ್ಛತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ರೈತ ಆದಪ್ಪ ನಾಲ್ತವಾಡ ಆಗ್ರಹಿಸಿದ್ದಾರೆ.

ಪಟ್ಟಣದ ಕೊಳವೆಬಾವಿಗಳು, ಭಾವಿಗಳು ತೋಟಗಳಲ್ಲಿ ಅಂತರ್ಜಲ ಹೆಚ್ಚಳವಾಗಲು ಈ ರಾಯನಕೆರೆ ನೀರು ಸಂಗ್ರಹವೇ ಮುಖ್ಯವಾಗಿದೆ. ಕೆರೆಯಲ್ಲಿ ನೀರು ಇದ್ದರೆ ಮಾತ್ರ ಅಂತರ್ಜಲ ಹೆಚ್ಚಾಗಲಿದೆ. ಹಲವು ವರ್ಷಗಳಿಂದ ಹಿನ್ನಿರು ಹರಿದು ಕೆರೆಗೆ ಬರುವ ಕಾಲುವೆ ಹೂಳು ತುಂಬಿದ್ದ ಕಾರಣ, ನೀರು ಕೆರೆಗೆ ಬರುತ್ತಿಲ್ಲ. ಇದರಿಂದ ಜಾನುವಾರು, ರೈತರಿಗೆ ನೀರಿನ ಅಭಾವ ತಲೆದೋರಲಿದೆ. ಬೇಸಿಗೆಯಿದ್ದ ಕಾರಣ ಇನ್ನು ಮಳೆಗಾಲ ಆರಂಭಕ್ಕೂ ಮುಂಚೆ ಸಣ್ಣ ನೀರಾವರಿ ಇಲಾಖೆ ಕಾಲುವೆ ಹೂಳು ತೆರವು ಮಾಡಲು ತುರ್ತು ಕ್ರಮಕ್ಕೆ ಮುಂದಾಗಬೇಕು. ರಾಯನ ಕೆರಗೆ ಸಮರ್ಪಕ ನೀರು ಹರಿದು ಬರುವಂತೆ, ಕ್ರಿಯಾಯೋಜನೆ ತಯಾರಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಅನುದಾನ ಮೂಲಕ ಇಂತಹ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದರೆ ರಾಯನಕೆರೆ ಉಳಿಸಲು, ನೀರಿಗಾಗಿ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಈಗಾಗಲೇ 2 ಮೂರು ವರ್ಷಗಳಿಂದ ಅಧಿಕಾರಿಗಳು ಕಾಲುವೆ ಹೂಳು ತುಂಬಿ, ಮಳೆ ಗಾಲದಲ್ಲಿ ಕಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿದ ಸಮಯದಲ್ಲಿ ಕಾಲುವೆ ಸ್ಥಳಕ್ಕೆ ಭೇಟಿ ನೀಡಿದ್ದು, ಆದರೆ ಕ್ರಮಕ್ಕೆ ಮುಂದಾಗಿಲ್ಲ. ಪ್ರತಿ ವರ್ಷ ಮುಂಗಾರು ಮಳೆಯ ನೀರು ರಾಯನಕೆರೆಗೆ ಹರಿದು ಬರುವ ನೀರು ಹಳ್ಳಕ್ಕೆ ಹರಿದು ವ್ಯರ್ಥವಾಗಿ, ಸ್ವಲ್ಪ ನೀರು ಮಾತ್ರ ಕೆರೆಗೆ ಬರುತ್ತಿದೆ. ಇದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಕಂಡು ಬರುತ್ತಿದೆ’ ಎಂದು ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-35-1703315163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.