ಕೊಪ್ಪಳ: ತಾಲ್ಲೂಕಿನ ಕೋಳೂರು-ಕಾಟ್ರಳ್ಳಿ ಬಳಿಯ 48 ಎಕರೆ ಜಮೀನಿನಲ್ಲಿ ₹60 ಕೋಟಿ ವೆಚ್ಚದಲ್ಲಿ ತಲೆಎತ್ತಿರುವ 1,500 ವಿದ್ಯಾರ್ಥಿನಿಯರ ಸಾಮರ್ಥ್ಯದ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜು ಮೇ 3ರಂದು ಲೋಕಾರ್ಪಣೆಗೊಳ್ಳಲಿದೆ.

ವಿಜ್ಞಾನ ಮತ್ತು ಕಲಾ ವಿಭಾಗ ಪ್ರವೇಶಕ್ಕೆ ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು. ವಿಜ್ಞಾನ ಕೋರ್ಸಿಗೆ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಹಾಗೂ ಕಲಾ ವಿಭಾಗಕ್ಕೆ ಸಮಾಜ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಅಂಕ ಪಡೆದಿರಬೇಕು.

ವಿಶಾಲವಾದ ಭೋಜನಾಲಯ-ಸಭಾಂಗಣ: ಅತ್ಯುತ್ತಮವಾದ ಗಾಳಿ ಮತ್ತು ಬೆಳಕು ಹೊಂದಿದ ಭೋಜನಾಲಯವು ಏಕಕಾಲಕ್ಕೆ 1,600 ವಿದ್ಯಾರ್ಥಿಗಳು ಭೋಜನ ಮಾಡಬಹುದಾಗಿದೆ. ಬೃಹದಾಕಾರದ ಸಭಾಂಗಣ ಇದೆ. ಅತ್ಯಾಧುನಿಕ ವ್ಯವಸ್ಥೆಯ ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಕೈತೊಳೆಯುವ ಸ್ಥಳ, ನಿರ್ವಹಣಾ ಕಚೇರಿ, ವೇದಿಕೆಯು ಆಕರ್ಷಕವಾಗಿದೆ. ಸ್ಟೀಮ್ ಕುಕ್ಕಿಂಗ್ ಯಂತ್ರದ ಸೌಲಭ್ಯವೂ ಇರುವುದು ಗಮನಾರ್ಹ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-35-7737310

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.