ಬಸ್ ನಿಲ್ದಾಣಕ್ಕೆ ಬಂದು ಕೂಡಲು ಸರಿಯಾದ ಸ್ಥಳಾವಕಾಶವಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಿಲ್ದಾಣದೊಳಗೆ ಮಣ್ಣು ಮತ್ತು ಸಿಮೆಂಟ್ ಹಾಕಿ ಅರ್ಧದಷ್ಟು ಮುಚ್ಚಿದ್ದಾರೆ. ಗ್ರಾಮ ಪಂಚಾಯಿತಿಯು ಇತ್ತ ಗಮನ ಹರಿಸಿಲ್ಲ. ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಕಳೆದಿವೆ. ಆದರೆ ಬಸ್ ನಿಲ್ದಾಣದಲ್ಲಿ ರಾಯಚೂರು ಜಿಲ್ಲೆ ಎಂದೇ ಇದೆ. ಯಾರೊಬ್ಬರು ಗಡಿ ಗ್ರಾಮಗಳ ಕಾಳಜಿ ತೋರುತ್ತಿಲ್ಲ ಎಂದು ಗ್ರಾಮದ ನೂರಭಾಷ, ಕಳಕಪ್ಪ ಸಿರಗುಂಪಿ, ಗೇನಪ್ಪ ದೊಡ್ಡಮನಿ ಸೇರಿ ಅನೇಕರು ಬೇಸರ ವ್ಯಕ್ತಪಡಿಸಿದರು.