ತಾವರಗೇರಾ: ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬಜೆಟ್ ಮಂಡನೆ ಸಭೆ ನಡೆಯಿತು.

ಪ.ಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026–2027ನೇ ಸಾಲಿನ ವಿವಿಧ ಕಾಮಗಾರಿಗಳು, ಅಭಿವೃದ್ಧಿ ಕ್ರಿಯಾಯೋಜನೆ ಅಡಿಯಲ್ಲಿ ತಯಾರಿಸಿದ ಬಜೆಟ್ ಮಂಡನೆ ಮಾಡಲಾಯಿತು.

ನೈರ್ಮಲ್ಯ, ಘನ ತ್ಯಾಜ್ಯ ನಿರ್ವಹಣೆ, ನೀರು ಸರಬರಾಜು, ಮುನ್ಸಿಪಲ್ ಮಾರುಕಟ್ಟೆ, ಸಾಮಾನ್ಯ ಆಡಳಿತ, ಲೋಕೋಪಯೋಗಿ ಕಾಮಗಾರಿ ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣ, ಸಾರ್ವಜನಿಕ ಆರೋಗ್ಯ,ಮತ್ತು ನಗರ ಬಡತನ ನಿರ್ಮೂಲನೆ, ಸಮಾಜ ಕಲ್ಯಾಣ ಕಾರ್ಯಗಳ ಕ್ರಿಯಾಯೋಜನೆ ಬಜೆಟ್ಅನ್ನು ಸಭೆಯಲ್ಲಿ ಸದಸ್ಯರು ಪರಿಶೀಲಿಸಿದರು.

₹ 7 ಕೋಟಿ 45 ಲಕ್ಷ ಅಂದಾಜು ಸ್ವಿಕೃತಿ, ₹ 7 ಕೋಟಿ 43 ಲಕ್ಷ ಅಂದಾಜು ಪಾವತಿ, ಮತ್ತು ₹ 2 ಕೋಟಿ 56 ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.

ನಾರಾಯಣಗೌಡ ಮೆದಿಕೇರಿ ಮಾತನಾಡಿ, ‘ಪ್ರತಿ ವರ್ಷದಂತೆ ಬಜೆಟ್ ತಯಾರಿಸಿದ್ದು, ಪಟ್ಟಣದ ಅಭಿವೃದ್ಧಿಗೆ ಸಮುದಾಯ ಮತ್ತು ಪಟ್ಟಣ ಪಂಚಾಯಿತಿ ಆಡಳಿತ, ಅಧಿಕಾರಿಗಳು, ಸರ್ವ ಸದಸ್ಯರು ಸಹಕಾರ ನೀಡಿದರೆ ಅನುಷ್ಠಾನ ಯಶಸ್ವಿಯಾಗುವುದು’ ಎಂದು ಹೇಳಿದರು

ಪ.ಪಂ ಉಪಾಧ್ಯಕ್ಷೆ ದುರಗಮ್ಮ ಶಿರವಾಟೆ, ಸ್ಥಾಯಿ ಸಮಿತಿ ಅಧ್ಯಕ್ಷ ವೀರನಗೌಡ ಪಾಟೀಲ, ಸದಸ್ಯರು, ನಾಮನಿರ್ದೇಶನ ಸದಸ್ಯರು, ಮುಖ್ಯಾಧಿಕಾರಿ ಮಹೇಶ ಅಂಗಡಿ, ಆರೋಗ್ಯ ನಿರೀಕ್ಷಕ ಫಯಾಜ್, ಎಂಜಿನಿಯರ್ ಮಂಜುನಾಥ, ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-35-2024238111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.