ತಾವರಗೇರಾ: ರಾಜ ಮಹಾರಾಜರ ಆಳ್ವಿಕೆ, ಅಂದಿನ ನೆಲ–ಜಲ, ದಾನ–ದತ್ತಿ, ವೀರು–ಶೂರರ ಪರಾಕ್ರಮ, ಕೆರೆ–ಕಟ್ಟೆ ನಿರ್ಮಿಸಿರುವ ಮಹನೀಯರು, ಮಹಾರಾಜರ ಸಾಧನೆಗಳನ್ನು ತಿಳಿಸುವ ಶಿಲಾಶಾಸನಗಳು, ವೀರಗಲ್ಲುಗಳು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾವರಗೇರಾ ಪಟ್ಟಣ ಹಾಗೂ ಸಮೀಪದ ಹೋಬಳಿ ಗ್ರಾಮಗಳಲ್ಲಿ ಅನಾಥವಾಗಿವೆ.

ಶ್ರೀಮಂತ ಇತಿಹಾಸವಿರುವ ಈ ಭಾಗದ ಶಿಲಾಶಾಸನ, ವೀರಗಲ್ಲುಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಸಂಶೋಧಕರ ಕಣ್ಣಿಗೆ ಬಿದ್ದು ಬೆಳಕು ಕಾಣಬೇಕಾದ ಶಾಸನಗಳು, ವೀರಗಲ್ಲುಗಳನ್ನು ದೇವರೆಂದು ಪೂಜಿಸಲಾಗುತ್ತಿದೆ. ಭಕ್ತರು ಹಾಕುವ ಎಣ್ಣೆಯ ಜಿಡ್ಡಿನಿಂದಾಗಿ ಶಾಸನಗಳು, ವೀರಗಲ್ಲುಗಳ ಮೇಲಿನ ಅಕ್ಷರಗಳು ಅಳಿಸಿ ಹೋಗುತ್ತಿದ್ದು, ಅದರೊಂದಿಗೆ ಈ ಪ್ರದೇಶದ ಇತಿಹಾಸವೂ ತಿಳಿಯದಂತಾಗಿದೆ.

ತಾವರಗೇರಾ ಸುತ್ತಲಿನ ಕೆಲ ಗ್ರಾಮಗಳಲ್ಲಿ ಶಾಸನಗಳು ವೀರಗಲ್ಲುಗಳು ತಿಪ್ಪೆಗುಂಡಿ, ರಸ್ತೆಯ ಬದಿ, ಊರ ಅಗಸಿ, ದೇವಸ್ಥಾನದ ಮುಂಭಾಗದಲ್ಲಿ ಅನಾಥವಾಗಿವೆ. ಆದರೆ ಕೆಲವು ಶಾಸನಗಳು ಮಾತ್ರ ಇತಿಹಾಸದ ಸಂಶೋಧಕರ ಕಣ್ಣಿಗೆ ಬಿದ್ದು ಬೆಳಕು ಕಂಡಿವೆ. ಇನ್ನೂ ಬಹಳಷ್ಟು ಶಾಸನಗಳು ಅನಾಥವಾಗಿಯೇ ಉಳಿದಿವೆ. ಕೋಟಿ ಲಿಂಗಗಳ ತಾಣವೆಂದು ಪ್ರಸಿದ್ಧ ಪುರ ಗ್ರಾಮದಲ್ಲಿ ಇಲ್ಲಿಯವರೆಗೆ 12 ಶಾಸನಗಳು ಲಭ್ಯವಾಗಿವೆ. ತಾವರಗೇರಾದಲ್ಲಿ ಮೂರು, ಕನ್ನಾಳ ಗ್ರಾಮದಲ್ಲಿ ಒಂದು ಶಾಸನ, ನಾರಿನಾಳ ಗ್ರಾಮದ ರಸ್ತೆಯಲ್ಲಿ ಒಂದು ವೀರಗಲ್ಲು ಲಭ್ಯವಾಗಿದೆ.

ಸ್ಥಳಗಳು: ತಾವರಗೇರಾ ಸಮೀಪದ ಪುರದ ಸೋಮನಾಥೇಶ್ವರ ದೇವಸ್ಥಾನದ ಮುಖ್ಯದ್ವಾರದ ಮುಂದೆ ತುಂಡುತುಂಡಾಗಿ ಒಂದು ಶಾಸನ ಬಿದ್ದಿದೆ. ಇನ್ನೂ ಕೆಲವು ಊರ ಅಗಸಿ ಮುಖ್ಯದ್ವಾರಕ್ಕೆ ಕಲ್ಲುಗಳಾಗಿ ಮಾರ್ಪಟ್ಟಿವೆ. ಕನ್ನಾಳ ಗ್ರಾಮದ ಊರ ಅಗಿಸಿಯ ಮುಖ್ಯ ರಸ್ತೆಯಲ್ಲಿ ಸುಣ್ಣ ಬಡಿದುಕೊಂಡು ಒಂದು ಶಾಸನ ನಿಂತಿದೆ. ತಾವರಗೇರಾ ಪಟ್ಟಣದ ವೈಜನಾಥ ದೇವಾಲಯದ ಮುಂದೆ ಅರ್ಧ ಮಣ್ಣಲ್ಲಿ ಮಣ್ಣಾಗಿ ಇನ್ನರ್ಧ ಎಣ್ಣೆ ಜಿಡ್ಡಿನಿಂದ ತುಂಬಿ ಹೋಗಿದೆ. ತಾವರಗೇರಾ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಳೆ, ಬಿಸಿಲು ಲೆಕ್ಕಿಸದೆ ಒಂದು ಶಾಸನ ನಿಂತಿದೆ. ನಾರಿನಾಳ ಗ್ರಾಮದ ರಸ್ತೆಯಲ್ಲಿ ದೂಳಿನಿಂದ ತುಂಬಿಕೊಂಡು ವೀರಗಲ್ಲು ನಿಂತಿದೆ. ಇನ್ನೂ ಕೆಲ ವೀರಗಲ್ಲು, ಶಾಸನಗಳು ರೈತರ ಆಯುಧ ಹರಿತ ಗೊಳಿಸುವ ಮಸಗಲ್ಲುಗಳಾಗಿ, ಕೆಲ ಪಟ್ಟಭದ್ರರು ಮನೆ ಕಟ್ಟಡಕ್ಕೆ ಕಲ್ಲುಗಳಾಗಿ ಬಳಕೆ ಮಾಡುತ್ತಿದ್ದಾರೆ. ಹೀಗಾದರೆ ಭವಿಷ್ಯದಲ್ಲಿ ಇಲ್ಲಿ ಶಾಸನಗಳು, ವೀರಗಲ್ಲುಗಳು ಇದ್ದವು ಎಂಬುದನ್ನು ಮರೆಯಬೇಕಾಗುತ್ತದೆ. ಹೀಗಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಾಸನಗಳು, ವೀರಗಲ್ಲುಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಇತಿಹಾಸ ಪ್ರೇಮಿಗಳ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-35-397943950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.