ಕೊಪ್ಪಳ: ಬಿರುಬಿಸಿಲಿನಿಂದ ಬಸವಳಿದ ಜನರಿಗೆ ಮಳೆಗಾಲ ಬಂತೆಂದರೆ ಎಲ್ಲಿಲ್ಲದ ಹಿಗ್ಗು. ಮುಂಗಾರು ಪೂರ್ವ ಹಾಗೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಇದು ಸುಗ್ಗಿಕಾಲ. ಆದರೆ ಪ್ರಕೃತಿ ತಾಪ ಮೆರೆದು ಸಿಡಿಲಿನ ಆರ್ಭಟಕ್ಕೆ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಮಳೆಗಾಲ ಬಂದರೆ ಕರಾಳ ನೆನಪುಗಳ ಛಾಯೆ ಕಾಡುತ್ತದೆ.

ಬದುಕಿನ ಬಂಡಿ ಸಾಗಿಸಲು ರೈತರು ಮಳೆ, ಚಳಿ ಹಾಗೂ ಬಿಸಿಲು ಲೆಕ್ಕಿಸದೇ ಹೊಲಗಳಲ್ಲಿ ದುಡಿಯುವುದು ಅನಿವಾರ್ಯ. ಅನಿವಾರ್ಯತೆಯ ಸಂಕಷ್ಟಕ್ಕೆ ಸಿಲುಕಿ ಕುಟುಂಬಕ್ಕೆ ಮುಖ್ಯ ಆಧಾರಸ್ಥಂಬವಾಗಿದ್ದ ವ್ಯಕ್ತಿಗಳೇ ಸಿಡಿಲಿನ ಆರ್ಭಟಕ್ಕೆ ಜಿಲ್ಲೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. 2023ರ ಏಪ್ರಿಲ್ನಿಂದ 2025ರ ಮಾರ್ಚ್ ಅಂತ್ಯದ ತನಕ ಜಿಲ್ಲೆಯಲ್ಲಿ 27 ಜನ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಒಟ್ಟು 27 ಜನರಲ್ಲಿ ಬಹುಪಾಲು ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕಿನವರು. ಕುಷ್ಟಗಿ ತಾಲ್ಲೂಕಿನ 11 ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ 9 ಜನ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ರೈತ ಶರಣಪ್ಪ ಮಾಸಪ್ಪ ಹೂಲಗೇರಿ (51) ಸಿಡಿಲಿಗೆ ಬಲಿಯಾಗಿದ್ದು, ಆತನಿಗೆ ಮೂವರು ಪುತ್ರರಿದ್ದಾರೆ. ಇತ್ತೀಚೆಗೆ ಕುಷ್ಟಗಿ ತಾಲ್ಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ದೇವರಾಯನಗೌಡ ಪೊಲೀಸ್ ಪಾಟೀಲ (50) ಪ್ರಾಣ ತೆತ್ತಿದ್ದರು. ಇಂಥ ಪ್ರಾಕೃತಿಕ ವಿಕೋಪಕ್ಕೆ ಸರ್ಕಾರದಿಂದ ಪರಿಹಾರವೇನೊ ಸಿಗುತ್ತದೆಯಾದರೆ ಬದುಕಿನ ಬಹುಮುಖ್ಯ ವ್ಯಕ್ತಿಯ ಪ್ರಾಣ ಹೋದರೆ ಅವರ ಕುಟುಂಬಕ್ಕೆ ದಿಕ್ಕು ಯಾರು ಎನ್ನುವ ಸಂಕಟ ಕಾಡುತ್ತದೆ.

ಸಿಡಿಲಿನ ಆರ್ಭಟದಿಂದ ಪಾರಾಗಲು ಮಳೆ ಆರಂಭವಾಗುತ್ತಿದ್ದಂತೆ ಹತ್ತಿರದ ಮನೆ, ಪಂಪ್ಹೌಸ್ ಅಥವಾ ಗಟ್ಟಿಯಾದ ಕಟ್ಟಡದ ಆಶ್ರಯ ಪಡೆಯಬೇಕಿದೆ. ಎತ್ತರದ ಮರಗಳು ಸಹಜವಾಗಿ ಸಿಡಿಲನ್ನು ಆಕರ್ಷಿಸುತ್ತವೆ, ಆದ್ದರಿಂದ ಮರದ ಕೆಳಗೆ ಆಶ್ರಯ ಪಡೆದುಕೊಳ್ಳಬಾರದು. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಗಳಲ್ಲಿ ಬಹುತೇಕರು ಮರಗಳ ಕೆಳಗೆ ಆಶ್ರಯ ಪಡೆದಾಗಲೇ ಬಲಿಯಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ, ಕಾಲುಗಳನ್ನು ಮಡಚಿ ತಲೆಯನ್ನು ತೊಡೆಗಳ ಮಧ್ಯೆ ಇಟ್ಟುಕೊಂಡು ಕುಳಿತುಕೊಳ್ಳುವುದು, ನೀರು ಮತ್ತು ಕಬ್ಬಿಣದಿಂದ ದೂರವಾಗಿ ನಿಲ್ಲಿಸುವ ಸಹಜ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಆದರೂ ಪ್ರಾಣ ಕಳೆದುಕೊಳ್ಳುವುದು ತಪ್ಪುತ್ತಿಲ್ಲ.

27 ಬಲಿ: 2023ರಲ್ಲಿ ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ ಇಬ್ಬರು, ಕುಷ್ಟಗಿ ಮೂರು, ಯಲಬುರ್ಗಾ ತಾಲ್ಲೂಕಿನಲ್ಲಿ ಆರು ಜನ, 2024ರಲ್ಲಿ ಗಂಗಾವತಿ, ಕೊಪ್ಪಳ, ಯಲಬುರ್ಗಾ, ಕುಕನೂರು ತಾಲ್ಲೂಕುಗಳಲ್ಲಿ ತಲಾ ಒಬ್ಬರು, ಕುಷ್ಟಗಿ ತಾಲ್ಲೂಕಿನಲ್ಲಿ ಮೂವರು ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 2025ರಲ್ಲಿ ಕೊಪ್ಪಳ ಹಾಗೂ ಕನಕಗಿರಿ ತಾಲ್ಲೂಕಿನಲ್ಲಿ ತಲಾ ಒಂದು, ಯಲಬುರ್ಗಾದಲ್ಲಿ ಎರಡು ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಐದು ಜನ ಪ್ರಾಣ ತೆತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-1369882262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.