ಬಸಾಪುರ (ಕೊಪ್ಪಳ): ಕೆಲವು ತಿಂಗಳುಗಳು ಕಳೆದಿದ್ದರೆ ಫಸಲಿಗೆ ಸಿದ್ಧವಾಗಿರುತ್ತಿದ್ದ ಭತ್ತದ ಗದ್ದೆಯ ತುಂಬಾ ಮರಳಿನ ರಾಶಿಯಿತ್ತು. ತುಂಗಭದ್ರಾ ಎಡದಂತೆ ಮುಖ್ಯ ಕಾಲುವೆಯ ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕೊಳಚೆ ನೀರು ಕಾಲುವೆಯ ಸಮೀಪದಲ್ಲಿಯೇ ಇರುವ ಗದ್ದೆಗೆ ನುಗ್ಗಿತ್ತು.

ಸಾವಿರಾರು ರೂಪಾಯಿ ಖರ್ಚು ಮಾಡಿ ಉಳಿಮೆ ಮಾಡಿದ್ದ ರೈತರ ಹೊಲದಲ್ಲಿ ಮಣ್ಣಿನ ರಾಶಿಯೇ ನಿರ್ಮಾಣವಾಗಿತ್ತು. ಬೃಹತ್ ಆಕಾರದಲ್ಲಿ ಬೆಳೆದು ನಿಂತಿದ್ದ ಮರಗಳು ನೀರಿನ ರಭಸಕ್ಕೆ ಕ್ಷಣಾರ್ಧದಲ್ಲಿ ನೆಲಕ್ಕುರುಳಿದ್ದವು. ಕಣ್ಣೆದುರೇ ಕಾಣುತ್ತಿದ್ದ ರೆಸಾರ್ಟ್ ಆವರಣದಲ್ಲಿ ಕಲ್ಲುಗಳು ತುಂಬಿಕೊಂಡಿದ್ದವು. ಮಣ್ಣಿನಿಂದ ನಿರ್ಮಿಸಲಾಗಿದ್ದ ಚಿಕ್ಕ ರಸ್ತೆ ಕಿತ್ತುಕೊಂಡು ಹೋಗಿತ್ತು.

ಈ ಎಲ್ಲಾ ಚಿತ್ರಣ ಕಂಡು ಬಂದಿದ್ದು ತಾಲ್ಲೂಕಿನ ಬಸಾಪುರ ಹಾಗೂ ಬಂಡಿಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯಲ್ಲಿ. ಮಂಗಳವಾರ ರಾತ್ರಿ ತುಂಗಭದ್ರಾ ಎಡದಂಡೆಯ ಮುಖ್ಯಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ನೀರು ಕಾಲುವೆಯ ಸಮೀಪದಲ್ಲಿಯೇ ಇದ್ದ ರೆಸಾರ್ಟ್ಗಳಿಗೆ, ಭತ್ತದ ಗದ್ದೆಗಳಿಗೆ ನುಗ್ಗಿದೆ. ಮಣ್ಣು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿ ಕಲ್ಲುಗಳು ಕಾಣಿಸುತ್ತಿವೆ. ಸುಮಾರು 50ರಿಂದ 60 ಅಡಿಯಷ್ಟು ಕಾಲುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿ ಅದರ ಅವಶೇಷಗಳು ಬಿದ್ದಿವೆ.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಕೆರೆ ತುಂಬಿಸಿಕೊಳ್ಳಲು ತುಂಗಭದ್ರಾ ಜಲಾಶಯದಿಂದ ನೀರು ಹರಿಸಲಾಗಿತ್ತು. ಜಲಾಶಯದ ಕ್ರೆಸ್ಟ್ಗೇಟ್ಗಳನ್ನು ಅಳವಡಿಸುತ್ತಿರುವ ಕಾರಣ ನೀರು ಹರಿಸುವುದನ್ನು ಮೊದಲು ನಿಲ್ಲಿಸಲಾಗಿತ್ತು. ಬೇಸಿಗೆ ಆರಂಭವಾಗಿರುವುದರಿಂದ ಕಲಬುರಗಿ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಎರಡೂ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ಭರ್ತಿ ಮಾಡಲು ನೀರು ಬಿಡಲಾಗಿತ್ತು.

ಕಾಲುವೆಯಲ್ಲಿ ಮೊದಲು ಭೋಂಗಾ ಬಿದ್ದಿದ್ದರಿಂದ ಸ್ವಲ್ಪ ನೀರು ಸೋರಿಕೆಯಾಗುತ್ತಿತ್ತು. ಈ ಜಾಗದಲ್ಲಿ ಮರಳಿನ ಚೀಲಗಳನ್ನು ಇರಿಸಿ ನೀರು ಹರಿಯುವುದನ್ನು ತಡೆಯಲಾಗಿತ್ತು. ಪಕ್ಕದ ಹೊಲಗಳಿಗೆ ಅಪಾರ ಪ್ರಮಾಣದ ನೀರು ಹರಿದಿದೆ. ಪಂಪ್ಸೆಟ್ ಆಧರಿಸಿ ಭತ್ತ ನಾಟಿ ಮಾಡಿದ್ದ ಹೊಲಕ್ಕೆ ನೀರು ನುಗ್ಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 0ಯಿಂದ 104 ಮೈಲ್ ತನಕ ಕೆರೆಗಳನ್ನು ತುಂಬಿಸಲು ಮಾರ್ಚ್ 16ರಿಂದ 27ರ ಅವಧಿಯಲ್ಲಿ 2000 ಕ್ಯುಸಕ್ಸ್ ನೀರು ಬಿಡುಗಡೆ ಮಾಡಲಾಗಿತ್ತು.

ಕಾಲುವೆ ಒಡೆದ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ ಕಾಲುವೆಯಲ್ಲಿ ಇರುವ ನೀರು ಮಾತ್ರ ಹರಿಯುತ್ತಿದೆ. ಗುತ್ತಿಗೆದಾರರಿಂದ ಎರಡ್ಮೂರು ದಿನಗಳಲ್ಲಿ ಕಾಲುವೆ ದುರಸ್ತಿ ಮಾಡಿಸಿ ಪುನಃ ನೀರು ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಕೊಪ್ಪಳ ತಾಲ್ಲೂಕಿನ ಅಗಳಕೇರಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಮರೇಶಪ್ಪ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-35-1453487768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.