ಪ್ರಮೋದ ಕುಲಕರ್ಣಿ

ಕೊಪ್ಪಳ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ತಡೆಗೋಡೆ ಒಡೆದು ತಾಲ್ಲೂಕಿನ ಬಸಾಪುರ ಹಾಗೂ ಬಂಡಿಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯಲ್ಲಿ ಹಲವು ದಿನಗಳ ಹಿಂದೆ ನಡೆದಿದ್ದ ದುರ್ಘಟನೆಯಲ್ಲಿ 35.6 ಹೆಕ್ಟೇರ್ ಭತ್ತದ ಬೆಳೆ ಹಾಳಾಗಿರುವ ಗೊತ್ತಾಗಿದೆ.

ಮಾರ್ಚ್ 18ರಂದು ರಾತ್ರಿ ಕಾಲುವೆ ತಡೆಗೋಡೆ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗಿ ಅಕ್ಕಪಕ್ಕದ ಹಳ್ಳಿಗಳ ಜಮೀನಿಗೆ ನೀರು ನುಗ್ಗಿತ್ತು. ಕೆಲವು ತಿಂಗಳುಗಳು ಕಳೆದಿದ್ದರೆ ಫಸಲಿಗೆ ಸಿದ್ಧವಾಗಿರುತ್ತಿದ್ದ ಭತ್ತದ ಗದ್ದೆಯ ತುಂಬಾ ಮರಳಿನ ರಾಶಿ ತುಂಬಿಕೊಂಡಿತ್ತು. ಘಟನೆ ನಡೆದಾಗ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು.

ಹಾನಿಗೆ ಒಳಗಾದ ಪ್ರದೇಶದದಲ್ಲಿ ಇತ್ತೀಚೆಗೆ ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದು ಬಸಾಪುರ ವ್ಯಾಪ್ತಿಯಲ್ಲಿ 15.6 ಹೆಕ್ಟೇರ್, ಅಯೋಧ್ಯಾದಲ್ಲಿ 1.2 ಹೆಕ್ಟೇರ್ ಮತ್ತು ರಾಜಾರಾಮಪೇಟೆಯಲ್ಲಿ 18.8 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿರುವುದು ವರದಿಯಿಂದ ತಿಳಿದುಬಂದಿದೆ. ಕೃಷಿ ಇಲಾಖೆ ಎಫ್ಐಡಿ ಹೊಂದಿರುವ ಹಾಗೂ ಹೊಂದಿರದ ಪ್ರದೇಶದ ಬಗ್ಗೆಯೂ ಪ್ರತ್ಯೇಕವಾಗಿ ಮಾಹಿತಿಯನ್ನು ಕಲೆಹಾಕಿದೆ. ಬಸಾಪುರದಲ್ಲಿ ಎಫ್ಐಡಿ ಹೊಂದಿರದ 11.6 ಹೆಕ್ಟೇರ್ ಇದ್ದು, ಅಯೋಧ್ಯಾದಲ್ಲಿ 1.2 ಹಾಗೂ ರಾಜಾರಾಮಪೇಟೆಯಲ್ಲಿ 4.8 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಎಫ್ಐಡಿ ಇದೆ.

ಘಟನೆ ನಡೆದ ದಿನವೇ ತಾಲ್ಲೂಕಿನ ಹಿಟ್ನಾಳ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸರ್ವೆ ಕಾರ್ಯಕ್ಕೆ ಕ್ರಮ ವಹಿಸಿದ್ದರು. ಕೃಷಿ ಇಲಾಖೆ ತನ್ನ ಸಿಬ್ಬಂದಿಯನ್ನು ಬಳಸಿಕೊಂಡು ಸರ್ವೆ ಕಾರ್ಯ ಮುಗಿಸಿದ್ದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಹಾನಿಯ ವರದಿ ಸಲ್ಲಿಕೆ ಮಾಡಿದ್ದಾರೆ.

ಆಗಿದ್ದೇನು?: ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿರುವ ಕಾರಣ ಈ ಸಲದ ಎರಡನೇ ಬೆಳೆಗೆ ಜಲಾಶಯದಿಂದ ನೀರು ಹರಿಸಿರಲಿಲ್ಲ. ಕಾಲುವೆ ಸಮೀಪದಲ್ಲಿ ಮತ್ತು ನೀರಾವರಿ ಭೂಮಿಯನ್ನು ಹೊಂದಿರುವ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತದ ನಾಟಿ ಮಾಡಿದ್ದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಕೆರೆ ತುಂಬಿಸಿಕೊಳ್ಳಲು ತುಂಗಭದ್ರಾ ಜಲಾಶಯದಿಂದ ನೀರು ಹರಿಸಲಾಗಿತ್ತು. ಬೇಸಿಗೆ ಆರಂಭವಾಗಿರುವುದರಿಂದ ಕಲಬುರಗಿ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು. ರಾತ್ರೊ ರಾತ್ರಿ ಕಾಲುವೆ ತಡೆಗೋಡೆ ಒಡೆದಿದ್ದರಿಂದ ನೀರು ನುಗ್ಗಿ ಕಾಲುವೆ ಸಮೀಪದಲ್ಲಿರುವ ರೆಸಾರ್ಟ್ಗಳು ಮತ್ತು ಭತ್ತದ ಗದ್ದೆಗೆ ನೀರು ನುಗ್ಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-35-225704518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.