ಕಾರಟಗಿ: ಅಸ್ಪೃಶ್ಯತೆ ಆಚರಣೆ ಅಪರಾಧ. ಕ್ಷೌರಿಕರು, ಮಡಿವಾಳರು ಅಸ್ಪೃಶ್ಯರನ್ನೂ ತಮ್ಮಂತೆಯೇ ಕಾಣಬೇಕು. ಎಲ್ಲರೂ ಸಮಾನತೆಯಿಂದ, ಸಾಮರಸ್ಯದಿಂದ ಶಾಂತಿ, ಸೌಹಾರ್ದತೆಯಿಂದ ಬಾಳಿ ಗ್ರಾಮದಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು. ಇದು ಎಲ್ಲರ ಜವಾಬ್ದಾರಿಯೂ ಹೌದು ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.

ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಭಾನುವಾರ ನಡೆದ ಶಾಂತಿ ಹಾಗೂ ಸೌಹಾರ್ದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅಸ್ಪೃಶ್ಯರು ಎಂಬ ಕಾರಣದಿಂದ ಕ್ಷೌರಿಕರು, ಇಸ್ತ್ರಿ ಮಾಡುವವರು ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನಾವೆಲ್ಲಾ ಬಂದಿದ್ದೇವೆ. ಮುಂದೆ ನೀವೆಲ್ಲರೂ ಸಹೋದರರಂತೆ ಹೊಂದಾಣಿಕೆಯಿಂದ ಬಾಳಿರಿ’ ಎಂದು ಕಿವಿಮಾತು ಹೇಳಿದರು.

ಗಂಗಾವತಿ ಡಿವೈಎಸ್ಪಿ ಚಾಯಪ್ಪ ನ್ಯಾಮಗೌಡರ್ ಮಾತನಾಡಿ, ‘ಅಸ್ಪೃಶ್ಯತೆ ಆಚರಣೆ ಕಾನೂನು ವಿರೋಧಿ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಅವಕಾಶವಿದೆ. ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು. ಇಲಾಖೆಗಳೊಂದಿಗೆ ಸಹಕರಿಸಬೇಕು’ ಎಂದರು.

ಗ್ರಾಮದ ನಾಗರಿಕರ ಪರವಾಗಿ ಮಾತನಾಡಿದ ಪರಮೇಶಗೌಡ ಪಾಟೀಲ್, ‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ. ಯಾರೋ ಸುಳ್ಳು ಸುದ್ದಿ, ವದಂತಿ ಹಬ್ಬಿಸಿರಬೇಕು. ಕ್ಷೌರಿಕರು, ಮಡಿವಾಳರು ಅನೋನ್ಯವಾಗಿದ್ದಾರೆ. ಅಂತಹ ಪ್ರಸಂಗ ಬಂದರೆ ಸರಿಪಡಿಸಲು ಗ್ರಾಮದ ಪ್ರಮುಖರು ಸಿದ್ದರಿದ್ದೇವೆ’ ಎಂದರು.

ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಇನ್ಸ್ಪೆಕ್ಟರ್ ಸುಧೀರಕುಮಾರ ಬೆಂಕಿ, ಕಂದಾಯ ಅಧಿಕಾರಿಗಳಾದ ಸಂಗಮ್ಮ ಹಿರೇಮಠ, ಮಂಜುನಾಥ ರಾಠೋಡ, ಪ್ರಮುಖರಾದ ಗುರುಸಿದ್ದಪ್ಪ ಎರಕಲ್, ಚಳ್ಳೂರು ಬಸವರಾಜ್, ಮಲ್ಲನಗೌಡ, ಶರಣೇಗೌಡ, ಜಡೆಪ್ಪ ವಕೀಲ, ಸುರೇಶ ಬೆಳ್ಳಿಕಟ್ಟಿ, ಮರಿಯಪ್ಪ ಸೇರಿದಂತೆ ಹಡಪದ, ಮಡಿವಾಳ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-1667677185

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.