ಕೊಪ್ಪಳ: ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳು ಹಾಗೂ ಮನೆಯ ಸಮೀಪದ ಕಿರು ರಸ್ತೆಗಳು ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬೀಸಾಡುತ್ತಿರುವ ಪ್ರಮುಖ ಪ್ರದೇಶಗಳನ್ನು ಗುರುತಿಸಿರುವ ನಗರಸಭೆ ಅಲ್ಲಿ ಕಸ ಬೀಸಾಡುವುದನ್ನು ತಡೆಯಲು ‘ಕಿರು ಉದ್ಯಾನ’ಗಳ ನಿರ್ಮಾಣದ ಪ್ರಯೋಗಕ್ಕೆ ಮುಂದಾಗಿದೆ.

ಅನಧಿಕೃತವಾಗಿ ಮೇಲಿಂದ ಮೇಲೆ ಕಸ ಬೀಸಾಡುವುದನ್ನು ಮನಗಂಡಿರುವ ನಗರಸಭೆ ಹಿಂದೆಯೇ ಅಲ್ಲಿ ಯಾವುದೇ ಕಸ, ತ್ಯಾಜ್ಯವನ್ನು ಹಾಕಬಾರದು. ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎನ್ನುವ ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ. ಆದರೂ ಜನ ಬೇಜವಾಬ್ದಾರಿಯಿಂದ ಎಲ್ಲಿ ಕಸ ಸುರಿಯಬೇಡಿ ಎಂದು ಹೇಳಲಾಗುತ್ತದೆಯೊ ಅದೇ ಫಲಕದ ಮುಂಭಾಗದಲ್ಲಿ ಜನ ಕಣ್ಣು ಮುಚ್ಚಿಕೊಂಡು ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ.

ಮನೆಮನೆಗೆ ಹೋಗಿ ಕಸ ಸಂಗ್ರಹ ಹಾಗೂ ವಿಲೇವಾರಿಗಾಗಿ ನಗರಸಭೆಯಿಂದ ವಾಹನಗಳ ವ್ಯವಸ್ಥೆಯಿದೆ. ಕೆಲವು ಬಡಾವಣೆಗಳಲ್ಲಿ ನಿತ್ಯ ಮತ್ತು ಇನ್ನಷ್ಟು ಕಡೆ ಎರಡ್ಮೂರು ದಿನಗಳಿಗೊಮ್ಮೆ ಕಸ ಸಂಗ್ರಹ ವಾಹನಗಳು ಬರುತ್ತಿವೆ. ಅಲ್ಲಿಯ ತನಕ ಕಾಯದೇ ಜನ ತಮ್ಮ ಮನೆ ಸಮೀಪದ ರಸ್ತೆ ಅಥವಾ ಮೂಲೆಯನ್ನು ತಾವೇ ಗುರುತಿಸಿ ಅದನ್ನೇ ತ್ಯಾಜ್ಯ ಎಸೆಯುವ ’ಅಧಿಕೃತ’ ತಾಣಗಳನ್ನು ಮಾಡಿಕೊಂಡಿದ್ದಾರೆ.

ಜಿಲ್ಲಾಕೇಂದ್ರದಲ್ಲಿ ನಮ್ಮ ಕೊಪ್ಪಳ, ಹಸಿರು, ಸುಂದರ ಕೊಪ್ಪಳ ಎನ್ನುವ ಧ್ಯೇಯವಾಕ್ಯದಡಿ ಒಟ್ಟು 18 ಕಡೆ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದ್ದು, ಪ್ರಾಯೋಗಿಕವಾಗಿ ಟ್ರಿನಿಟಿ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್ ಪಕ್ಕದಲ್ಲಿ ಹಾಗೂ ಮೀನು ಮಾರುಕಟ್ಟೆ ಬಳಿ (ರಾಜಕಾಲುವೆ ಸಮೀಪ) ’ಮಿನಿ ಉದ್ಯಾನ’ ನಿರ್ಮಿಸಲಾಗಿದೆ.

ಅನೇಕ ವರ್ಷಗಳಿಂದ ಕಸ ಎಸೆಯುತ್ತಿರುವ ತಾಣವನ್ನು ಗ್ರೂಪ್ ಎ., ಇತ್ತೀಚೆಗಿನ ಹಲವು ತಿಂಗಳುಗಳಿಂದ ಕಸ ಬೀಸಾಡುವ ತಾಣವನ್ನು ಗ್ರೂಪ್ ಬಿ ಮತ್ತು ಕೆಲವು ಬಾರಿಯಷ್ಟೇ ಕಸ ಎಸೆಯುವ ಸ್ಥಳಗಳಿಗೆ ಸಿ ಎಂದು ನಗರಸಭೆ ಗುರುತಿಸಿದೆ. ಇದರಲ್ಲಿ ಗ್ರೂಪ್ ಎ ವಿಭಾಗದಲ್ಲಿಯೇ ಹತ್ತು ಸ್ಥಳಗಳು ಇವೆ. ಕಸ ಸಂಗ್ರಹ ಮಾಡುವ ಒಟ್ಟು 26 ವಾಹನಗಳಲ್ಲಿ 20 ಸರಿಯಾದ ಸ್ಥಿತಿಯಲ್ಲಿದ್ದು, ಇನ್ನು ಆರು ದುರಸ್ತಿಯಾಗಬೇಕಿದೆ. ಈ ವಾಹನಗಳು ಪೂರ್ಣವಾಗಿ ಲಭ್ಯವಾದರೆ ಎರಡು ದಿನಗಳಿಗೊಮ್ಮೆ ವಾಹನಗಳು ಮನೆಮನೆಗೆ ಹೋಗಿ ಕಸ ಸಂಗ್ರಹಿಸಲು ಸಾಧ್ಯವಾಗುತ್ತದೆ.

ಜಿಲ್ಲಾಕೇಂದ್ರದಲ್ಲಿ ಲೇಬರ್ ವೃತ್ತದ ಸಮೀಪದ ಟ್ರಿನಿಟಿ ಶಾಲೆಯ ಬಳಿ, ನಗರ ಪೊಲೀಸ್ ಠಾಣೆ ಮುಂದಿನ ರಸ್ತೆಯಿಂದ ಜವಾಹರ ರಸ್ತೆಗೆ ಹೋಗುವ ಮಾರ್ಗದ ಎಡಭಾಗದಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಿಂದೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಕ್ಬರ್ ಪಾಷಾ ಪಲ್ಟನ್ ಅವರು ಕಸ ಬೀಸಾಡುವವರ ಮೇಲೆ ಕಣ್ಗಾವಲು ವಹಿಸಲು ದಿನಪೂರ್ತಿ ಟ್ರಿನಿಟಿ ಶಾಲೆಯ ಸಮೀಪವೇ ಮೊಕ್ಕಾಂ ಹೂಡಿದ್ದರು. ಕಣ್ಗಾವಲು ವಹಿಸಿದ್ದಾಗ ಸುಮ್ಮನಿದ್ದ ಜನ ರಾತ್ರಿಯಾಗುತ್ತಿದ್ದಂತೆಯೇ ಯಥಾರೀತಿ ಕಸ ಎಸೆಯುತ್ತಿದ್ದರು.

ಇದರಿಂದ ಬೇಸತ್ತು ನಗರಸಭೆ ಆಡಳಿತ ಈಗ ಟ್ರಿನಿಟಿ ಶಾಲೆಯ ಬಳಿ ಕಸ ಎಸೆಯುತ್ತಿದ್ದ ಜಾಗದಲ್ಲಿ ಇಟ್ಟಿಗೆಗಳಿಂದ ಕಿರಿದಾದ ಉದ್ಯಾನ ನಿರ್ಮಿಸಿ, ವಾಹನಗಳ ವ್ಯರ್ಥ ಟಯರ್ಗಳನ್ನು ಬಳಸಿ ಅದರಲ್ಲಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ಟೈಯರ್ಗಳಿಗೆ ತರಹೇವಾರಿ ಬಣ್ಣಗಳನ್ನು ಬಳಿದಿದ್ದು ಯಾವಾಗಲೂ ಕಸದಿಂದ ದುರ್ನಾತ ಬೀರುತ್ತಿದ್ದ ಜಾಗದಲ್ಲಿ ಈಗ ’ಕಿರು ಉದ್ಯಾನ’ ಕಂಗೊಳಿಸುತ್ತಿದೆ. ಇದೇ ರೀತಿ ಜಿಲ್ಲಾಕೇಂದ್ರದ ಹಲವು ಕಡೆ ಹಾಗೂ ಗಂಗಾವತಿಯಲ್ಲಿಯೂ ಮಾಡಲಾಗಿದೆ. ಇದು ಸ್ಥಳದ ಸುತ್ತಮುತ್ತಲು ವಾಸಿಸುತ್ತಿರುವ ಜನರಿಗೆ ಅಂದವಾಗಿ ಕಾಣುತ್ತಿದೆ. ತ್ಯಾಜ್ಯ ಎಸೆಯುತ್ತಿದ್ದ ತಾಣದಲ್ಲಿ ಈಗ ಸ್ವಚ್ಛತೆ ಕಾಣುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-35-1421020271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.