ಕೊಪ್ಪಳ: ನಗರದ ಸರ್ದಾರ್ ಗಲ್ಲಿ ಮತ್ತು ಕಲಾಲ್ ಓಣಿಯಲ್ಲಿ ಸಕಾಲಕ್ಕೆ ಕುಡಿಯುವ ನೀರು ಸರಬರಾಜು ಆಗದಿರುವುದು ಹಾಗೂ ಚರಂಡಿ ಸ್ವಚ್ಛತೆ ಮಾಡದಿರುವುದನ್ನು ಖಂಡಿಸಿ ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಮಟನ್ ಮಾರುಕಟ್ಟೆ ಮುಂಭಾಗ ಹಾಗೂ ಜವಾಹರ ರಸ್ತೆ ಬಂದ್ ಮಾಡಿ ಕೊಡಗಳನ್ನು ರಸ್ತೆಗೆ ಅಡ್ಡವಾಗಿ ಇಟ್ಟು ರಸ್ತೆ ತಡೆ ಮಾಡಿ ‘ಮಾರುಕಟ್ಟೆ ಪಕ್ಕದ ಸಂಪರ್ಕ ರಸ್ತೆಯ ಹುಲಿಗೆಮ್ಮ ದೇವಸ್ಥಾನ ಸಮೀಪ ಚರಂಡಿ ಹಲವು ದಿನಗಳಿಂದ ಸ್ವಚ್ಛತೆ ಮಾಡಿಲ್ಲ. ಇದರಿಂದಾಗಿ ಚರಂಡಿ ನೀರು ಹೊರಗೆ ಹರಿಯುತ್ತಿದ್ದು, ಮನೆಗಳ ಬಚ್ಚಲಿನ ನೀರು ಸಹ ಸರಿಯಾಗಿ ಹರಿಯದೆ ಜನರಿಗೆ ತೀವ್ರ ತೊಂದರೆ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ನೀರಿನ ಕೊರತೆಯ ಕಾರಣಕ್ಕೆ ಮಹಿಳೆಯರು ಕೊಡಗಳನ್ನು ರಸ್ತೆ ಮಧ್ಯೆ ಇರಿಸಿ ಆಕ್ರೋಶ ಹೊರಹಾಕಿದರು. ಘಟನೆಯಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನೆ ಕೈ ಬಿಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-35-1742870623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.