ಯಲಬುರ್ಗಾ: ತಾಲ್ಲೂಕಿನ ಕಲ್ಲಭಾವಿ ಗ್ರಾಮದ ವೀರಬಸವಾರ್ಯ ಮಠದ ಸಭಾಂಗಣದಲ್ಲಿ ಮಾಸಿಕ ಶಿವಾನುಭವ ಹಾಗೂ ಮಲ್ಲಿನಾಥ ಶರಣ ಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಚನ ಸಾಹಿತಿ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿ, ‘ಶರಣರ ಸಂಸ್ಕೃತಿ ಮತ್ತು ವಚನ ಸಾಹಿತ್ಯವು ಪರಿಪೂರ್ಣ ಮಾನವತ್ವನ್ನು ಕಲಿಸಿಕೊಡುತ್ತವೆ. ಸಮುದಾಯ ಸಂಘಟನೆಯಲ್ಲಿ ನೆಮ್ಮದಿಯ ಹಾಗೂ ಸುಖ ಜೀವನ ನಡೆಸಲು ಅನುಸರಿಸಬೇಕಾದ ಬದುಕಿನ ಕ್ರಮಗಳನ್ನು ತಿಳಿಸಿಕೊಡುತ್ತವೆ. ಪ್ರಸ್ತುತ ಸಂದರ್ಭದಲ್ಲಿ ಯುವಕರು ವಚನಗಳ ಅಧ್ಯಯನ ಮಾಡಿ ಶರಣ ಸಂಸ್ಕೃತಿಯನ್ನು ರೂಢಿಸಿಕೊಂಡು ಮಾದರಿ ವ್ಯಕ್ತಿತ್ವವನ್ನು ಸಂಪಾದಿಸಬೇಕಾಗಿದೆ’ ಎಂದರು.

ಕೊಪ್ಪಳದ ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ ಸಸಿಮಠ ಮಾತನಾಡಿ, ‘ಮೂಢನಂಬಿಕೆ, ಅಜ್ಞಾನವನ್ನು ತೊಡೆದು ಹಾಕಿ ಪರಸ್ಪರ ಪ್ರೀತಿ ವಿಶ್ವಾಸವನ್ನು ರೂಢಿಸಿಕೊಂಡು ಮಾದರಿ ಜೀವನ ನಡೆಸಬೇಕು. ವ್ಯಕ್ತಿಗಳ ಪೂಜೆ ಮುಖ್ಯವಲ್ಲ. ಅವರಲ್ಲಿರುವ ಒಳ್ಳೆಯ ಗುಣಗಳನ್ನು ಗೌರವಿಸಿ, ಅವುಗಳ ಅನುಕರಣೆಯ ಮೂಲಕ ಗೌರವಿಸುವುದು ಮುಖ್ಯ’ ಎಂದರು.

ಗಣ್ಯರಾದ ಅಮರೇಶಪ್ಪ ಗಡಿಹಳ್ಳಿ, ಬಸವರಾಜ ಇಂಗಳದಾಳ, ರುದ್ರಪ್ಪ ಹಳ್ಳಿ, ಶರಣಬಸಪ್ಪ ಬ್ಯಾಲಿಹಾಳ, ಶರಣಪ್ಪ ಅಸಬಿ ಮಾತನಾಡಿದರು. ವಿರೂಪಾಕ್ಷಯ್ಯ ಹಿರೇಮಠ, ಗಂಗಮ್ಮ ಕುರಕುಂದಿ, ಶಂಕ್ರಪ್ಪ ಬೇವೂರು, ಹಂಪಣ್ಣ ತಾವರಗೇರಾ, ನಾಗನಗೌಡ ಜಾಲಿಹಾಳ ರೇವಣಪ್ಪ ಮಂತ್ರಿ, ಅಮರೇಶ ದೇವಲ, ಪಾಲಾಕ್ಷಪ್ಪ ಹುಣಶಿಹಾಳ, ಬಸಣ್ಣ ದೇವಲ್, ಸಂಗಪ್ಪ ಹುಣಶಿಹಾಳ, ಹನಮಗೌಡ ಬಳ್ಳಾರಿ, ಶ್ರೀಕಾಂತಗೌಡ ಮಾಲಿಪಾಟೀಲ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-35-1784413752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.