ಯಲಬುರ್ಗಾ: ‘ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅನಗತ್ಯ ತೇಜೋವಧೆಗೆ ಯತ್ನಿಸುವವರ ನಡೆಯನ್ನು ಖಂಡಿಸಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು. ಶ್ರೀಗಳ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಸಮಾಜದ ಮುಖಂಡರು ಮಾತನಾಡಿ, ‘ಸ್ವಾಮೀಜಿಯವರು ಪೀಠಾರೋಹಣ ಮಾಡಿದಾಗಿನಿಂದಲೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಮಾಜಕ್ಕೆ 2ಎ ಮೀಸಲಾತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ದಿಟ್ಟತನ ಸಹಿಸಿಕೊಳ್ಳದೇ ಕೆಲವರು ಇವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ತೊಂದರೆ ಕೊಡುವವರ ವಿರುದ್ಧ ಹೋರಾಟ ನಿಶ್ಚಿತ’ ಎಂದರು.

ಪ.ಪಂ. ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ, ಅಮರೇಶ ಹುಬ್ಬಳ್ಳಿ, ವಕೀಲೆ ಅಕ್ಕಮಹಾದೇವಿ ಪಾಟೀಲ, ರಾಜಶೇಖರ ನಿಂಗೋಜಿ, ವೀರಣ್ಣ ನಿಂಗೋಜಿ, ಸಿದ್ರಾಮೇಶ ಬೇಲೇರಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಕರಮುಡಿ, ಶ್ರೀಶೈಲಪ್ಪ ಗೊಂಡಬಾಳ, ಕರಿಸಿದ್ದಪ್ಪ ಸಿಳ್ಳಿನ, ಶರಣಪ್ಪ ಅರಕೇರಿ, ಮಲ್ಲಿಕಾರ್ಜುನ ನರೇಗಲ್ಲ, ಶರಣಪ್ಪ ಗೋಣಿ, ಸಿದ್ದಪ್ಪ ಹಕ್ಕಿಗುಣಿ, ಮಹಾಂತೇಶ ಭಾಸ್ಕರ, ಜಿ.ಎಸ್. ಪಾಟೀಲ ಸೇರಿ ಅನೇಕರು ಹಾಜರಿದ್ದರು. ತಹಶೀಲ್ದಾರ್ ಪರವಾಗಿ ಆಹಾರ ಶಿರಸ್ತೇದಾರ ಮಲ್ಲಯ್ಯಸ್ವಾಮಿ ಶಾಸ್ತ್ರಿಮಠ ಮನವಿ ಸ್ವೀಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-35-273962242

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.