ಯಲಬುರ್ಗಾ: ಪಟ್ಟಣದ ಒಂದನೇ ವಾರ್ಡಿನ ಯಲ್ಲಮ್ಮನ ಗುಡಿಯ ಹತ್ತಿರ ಚರಂಡಿ ಭರ್ತಿಯಾಗಿದ್ದು, ದುರ್ನಾತ ಬೀರುತ್ತಿದೆ. ವಿಲೇವಾರಿ ಮಾಡದೇ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಬಗ್ಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಆರಂಭಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದಿನಬಳಕೆ ನೀರು ಹಾಗೂ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೇ ರಸ್ತೆಯ ಮೇಲೆ ಹರಿಯುವ ಸ್ಥಿತಿಗೆ ಬಂದಿವೆ.

ಚರಂಡಿ ಸ್ವಚ್ಛ ಮಾಡಲು ಬರುವ ಪೌರ ಕಾರ್ಮಿಕರು ಕೂಡಾ ಸರಿಯಾಗಿ ಚರಂಡಿಯಲ್ಲಿನ ಕೊಳೆಯನ್ನು ತೆಗೆಯದೇ ಅಲ್ಲಲ್ಲಿ ತೆಗೆದು ಕೆಲವೊಂದು ಕಡೆ ಹಾಗೆಯೇ ಬಿಡುವುದು ಮಾಡುತ್ತಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ತೆಗೆಯುವುದು ಮತ್ತೊಂದು ಬದಿಯಲ್ಲಿ ಹಾಗೆ ಬಿಡುವುದು, ಎರಡು ಕಡೆ ಸ್ವಚ್ಛಗೊಳಿಸಲು ಒತ್ತಾಯಿಸಿದೂ ಕಿವಿಗೆ ಹಾಕಿಕೊಳ್ಳದೇ ಸಾಹೆಬ್ರು ಒಂದೆ ಕಡೆ ತೆಗೆಯಲು ಹೇಳಿದ್ದಾರೆ ಎಂದು ಪ್ರಕ್ರಿಯಿಸುತ್ತಾರೆ.

ಹೀಗೆ ಪಟ್ಟಣದ ಅನೇಕ ವಾರ್ಡಿನಲ್ಲಿ ದಿನಗಳಕೆ ನೀರು ಚರಂಡಿ ಸೇರುತ್ತಿದ್ದು, ಅ ನೀರು ಸುಗಮವಾಗಿ ಹರಿದು ಹೋಗಲು ಸಾಧ್ಯವಾಗದೇ ನಿಂತಲ್ಲೆ ನಿಂತು ಸೊಳ್ಳೆಗಳ ಹಾಗೂ ದುರ್ನಾತ ಬೀರುವ ತಾಣವಾಗಿವೆ. ಕೂಡಲೇ ಪಂಚಾಯಿತಿ ಅಧಿಕಾರಿಗಳು ಇತ್ತ ಕಡೆ ಗಮನಕೊಟ್ಟು ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಅಲ್ಲಿಯ ನಿವಾಸಿಗರಾದ ಶಶಿಧರ, ನೀಲಕಂಠಪ್ಪ ಹಾಗೂ ಇತರರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-35-897465055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.