ಗುರುವಾರ , ನವೆಂಬರ್ 21, 2019
24 °C

ಕಮ್ಯುನಿಸ್ಟ್ ಪಕ್ಷ ಚಳವಳಿಗೆ 100 ವರ್ಷ ಸಂಭ್ರಮ

Published:
Updated:
Prajavani

ಗಂಗಾವತಿ: ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಹೋರಾಟವನ್ನು ನಡೆಸಲು ಸ್ಥಾಪನೆ ಮಾಡಿದ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡಿ 100 ವರ್ಷಗಳು ಆಗಿದ್ದರಿಂದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದ ಸಿಪಿಐಎಂ ಪಕ್ಷದ ಕಚೇರಿಯಲ್ಲಿ ಗುರುವಾರ ಸಂಭ್ರಮ ಆಚರಿಸಿದರು.

ಎಸ್‍ಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸಲು ಪಕ್ಷವನ್ನು ಕಟ್ಟಿಕೊಳ್ಳಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆಯು ಸಹ ಪಕ್ಷವು ಹೋರಾಟಗಳನ್ನು ನಡೆಸುತ್ತಿದೆ. ಬಡವರ, ಹಿಂದುಳಿದವರ, ಕಾರ್ಮಿಕರ, ಕೂಲಿಕಾರರ ಪರವಾಗಿ ಪಕ್ಷವು ನಿಂತುಕೊಂಡು ಅವರಿಗೆ ನ್ಯಾಯವನ್ನು ಕೊಡಿಸುವಂತಹ ಕೆಲಸ ಮಾಡುತ್ತಿದೆ ಎಂದರು.

ಪಕ್ಷದ ಕಾರ್ಯಕರ್ತರಾದ ನಿರುಪಾದಿ ಬೆಣಕಲ್, ಬಾಳಪ್ಪ ಹುಲಿಹೈದರ, ಮಂಜುನಾಥ ಡಗ್ಗಿ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)