ಕೊಪ್ಪಳ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಪದಗ್ರಹಣಕ್ಕೆ ಬುಧವಾರ ವೇದಿಕೆ ಸಿದ್ಧಗೊಂಡಿದ್ದರೆ, ಇನ್ನೊಂದೆಡೆ ಸಚಿವ ಸ್ಥಾನ ಪಡೆಯಲು ಜಿಲ್ಲೆಯ ಶಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿರುವ ಕೊಪ್ಪಳ ಜಿಲ್ಲೆಯಲ್ಲಿಯೂ ಸಚಿವ ಸ್ಥಾನ ತಮ್ಮದಾಗಿಸಿಕೊಳ್ಳಲು ಶಾಸಕರು ತಮ್ಮದೇ ಮಾರ್ಗದಲ್ಲಿ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಸಲಹೆಗಾರರಾಗಿದ್ದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಹಿಂದೆ ಉನ್ನತ ಶಿಕ್ಷಣ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಣೆ ಮಾಡಿದ್ದಾರೆ. ಬಳಿಕ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಯೂ ಇದೆ.

ಸಚಿವ ಸ್ಥಾನ ಬೇಕು ಎಂದು ಎಲ್ಲಿಯೂ ಮುಕ್ತವಾಗಿ ಹೇಳಿಕೊಳ್ಳದಿದ್ದರೂ ಅದಕ್ಕಾಗಿ ರಾಯರಡ್ಡಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಗುಟ್ಟೇನಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರ ಜೊತೆ ಆಪ್ತ ಒಡನಾಟ ಹೊಂದಿರುವ ರಾಯರಡ್ಡಿ ಅವರು ಶಾಸಕರಾಗಿದ್ದುಕೊಂಡೇ ಯಲಬುರ್ಗಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಹಿಂದೆ ಸಚಿವರಾಗಿದ್ದಾಗಲೂ ಸಮರ್ಥವಾಗಿ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಹಿರಿಯರ ಲೆಕ್ಕಾಚಾರ ಹಾಗೂ ಲಿಂಗಾಯತದ ಕೋಟಾದಲ್ಲಿ ತಮಗೂ ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ರಾಯರಡ್ಡಿ ಹೊಂದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಖಾತೆ ಹೊಂದಿದ್ದ ಕನಕಗಿರಿ ಕ್ಷೇತ್ರದ ಶಿವರಾಜ ತಂಗಡಗಿ ಭೋವಿ ಸಮುದಾಯಕ್ಕೆ ಸೇರಿದವರು. ಮೀಸಲಾತಿ ಕ್ಷೇತ್ರದಿಂದ ಶಾಸಕರಾಗಿರುವ ಅವರ ಹಿಂದೆ ಎರಡು ಬಾರಿ ಶಾಸಕರಾಗಿದ್ದಾಗಲೂ ಸಚಿವರಾಗಿದ್ದಾರೆ. ಆದರೆ ಹಿಂದಿನ ಎರಡೂ ಬಾರಿಯೂ ಅವರು ಪೂರ್ಣ ಐದು ವರ್ಷ ಕೆಲಸ ಮಾಡಲು ಅವಕಾಶ ಸಿಕ್ಕಿರಲಿಲ್ಲ. ತಂಗಡಗಿ ಮೂರು ವರ್ಷಗಳಿಂದ ಸಚಿವರಾಗಿದ್ದಾರೆ. ಈ ಬಾರಿಯಾದರೂ ಅವರಿಗೆ ಪೂರ್ಣ ಅವಧಿ ಮುಗಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಕುರುಬ ಸಮುದಾಯದ ಶಾಸಕ ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ ಸತತ ಮೂರು ಬಾರಿ ಶಾಸಕರಾಗಿದ್ದಾರೆ. ಇದೇ ಸಮುದಾಯದವರೇ ಹಿಂದೆ ಮುಖ್ಯಮಂತ್ರಿಯಾಗಿದ್ದರಿಂದ ಹಿಟ್ನಾಳಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಶತಾಯು ಗತಾಯು ಈ ಬಾರಿ ಸಚಿವರಾಗಲೇಬೇಕು ಎನ್ನುವ ಪಟ್ಟಿನೊಂದಿಗೆ ರಾಘವೇಂದ್ರ ಹಿಟ್ನಾಳ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಜಿಲ್ಲೆಯಲ್ಲಿರುವ ಈ ಮೂವರು ಶಾಸಕರಲ್ಲಿ ತಮ್ಮ ನೆಚ್ಚಿನ ನಾಯಕ ಸಚಿವರಾಗಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ. ತಂಗಡಗಿಯ ಬೆಂಬಲಿಗರು ಹಾಗೂ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಪ್ರಮುಖರು ಕನಕಗಿರಿಯ ಕನಕಾಚಲಪತಿ ಹಾಗೂ ಅಂಜನಾದ್ರಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈಗಿನ ಕಾಂಗ್ರೆಸ್ ಸರ್ಕಾರದ ಅವಧಿ ಎರಡು ವರ್ಷ ಉಳಿದಿದ್ದು ಈ ಅವಧಿಯಲ್ಲಿ ಸಚಿವರಾದರೆ ಮುಂದಿನ ಚುನಾವಣೆಗೂ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಮೂವರೂ ಶಾಸಕರದ್ದಾಗಿದೆ. ಐದು ವಿಧಾನಸಭಾ ಕ್ಷೇತ್ರಗಳಷ್ಟೇ ಇರುವುದರಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯಿದ್ದು, ಈ ಒಂದು ಸಚಿವಗಿರಿಗಾಗಿ ಮೂವರು ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವ ಕುತೂಹಲವೂ ಮನೆ ಮಾಡಿದೆ.

ತಮ್ಮ ಆಪ್ತರ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ಬೆಂಗಳೂರು, ದೆಹಲಿಯಲ್ಲಿ ಬೀಡುಬಿಟ್ಟ ಶಾಸಕರು ಮೊದಲ ಬಾರಿಗೆ ಸಚಿವರಾಗುವ ಆಸೆಯಲ್ಲಿ ಶಾಸಕ ಹಿಟ್ನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.