ಕೊಪ್ಪಳ: ಬಿರುಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಶನಿವಾರ ರಾತ್ರಿಯಿಂದ ಸುರಿದ ಬಿರುಸಿನ ಮಳೆ ತಂಪು ನೀಡಿದೆ. ಆದರೆ ಅಷ್ಟೇ ಅನಾಹುತವೂ ಆಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿಯಿತು. ನಗರದ ಹೊರವಲಯದ ಕಾಮನೂರು ರಸ್ತೆ, ಕೊಪ್ಪಳ ನಗರದ ಅಲ್ಲಲ್ಲಿ ರಸ್ತೆಗೆ ಮರಗಳು ಉರುಳಿಬಿದ್ದಿವೆ. ಭಾನುವಾರ ಬೆಳಗಿನ ಜಾವ 4.30ರ ಸುಮಾರಿಗೆ ತಾಲ್ಲೂಕಿನ ಕಾಮನೂರು ಗ್ರಾಮದಿಂದ ಮರಿಯಮ್ಮನಹಳ್ಳಿಯಲ್ಲಿರುವ ಬಿಎಂಎಂ ಕಾರ್ಖಾನೆಗೆ ಕೆಲಸಕ್ಕೆ ಬೈಕ್ ಮೇಲೆ ತೆರಳುತ್ತಿದ್ದಾಗ ಸಂಭವಿಸಿದ ಅವಘಡದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಕಾಮನೂರು ಹಾಗೂ ಭೀಮನೂರು ಗ್ರಾಮಗಳ ಮಧ್ಯದ ರಸ್ತೆಯಲ್ಲಿ ಮಳೆಯಿಂದ ಬಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಕಾಮನೂರು ಗ್ರಾಮದ ಕಿರಣ ತಂದೆ ಹನುಮಂತಪ್ಪ ಕುರಬಡಗಿ (23) ಮೃತಪಟ್ಟಿದ್ದು, 25 ವರ್ಷದ ಮಹೇಶ ತಂದೆ ಮಲ್ಲಪ್ಪ ಹುಳ್ಳಿ ಗಾಯಗೊಂಡಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಸಂಜೆ ಕಾರಟಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಮೇತ ಮಳೆ ಸುರಿದಿತ್ತು. ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ವ್ಯಾಪ್ತಿಯಲ್ಲಿ ಸಾಧಾರಣವಾಗಿ ಮಳೆಯಾಯಿತು. ರಾತ್ರಿ ಹೊತ್ತು ಏರುತ್ತಿದ್ದಂತೆಯೇ ಮಳೆಯ ಆರ್ಭಟವೂ ಹೆಚ್ಚಾಗುತ್ತಲೇ ಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.