ಬುಧವಾರ, ನವೆಂಬರ್ 13, 2019
21 °C

ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿದ ಚಿತ್ತಾ ಮಳೆ: ಬೆಳೆ ಹಾನಿ

Published:
Updated:
Prajavani

ಕೊಪ್ಪಳ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 11.45ಕ್ಕೆ ಆರಂಭವಾದ ಮಳೆ ಶನಿವಾರ ಬೆಳಿಗ್ಗೆ 8ರವರೆಗೆ ಬಿಟ್ಟು ಬಿಡದೇ ಸುರಿಯಿತು.

ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಪುರ ಗ್ರಾಮಗಳ ವ್ಯಾಪ್ತಿ ರೈತರು ಬೆಳೆದ ಭತ್ತ ನೆಲಕ್ಕೊರಗಿದೆ.

ತೆನೆ ತುಂಬಿ ನಿಂತಿದ್ದ ಬೆಳೆಗಳು ನೆಲಕ್ಕೊರಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತರು ಕಂಗಾಲಾಗಿದ್ದರೆ. ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಮೂರು ಗೇಟ್‌ಗಳನ್ನು ತೆಗೆಯಲಾಗಿದೆ. ವ್ಯಾಪಕ ಪ್ರಮಾಣದ ನೀರನ್ನು ಹೊರಕ್ಕೆ ಹರಿಬಿಡಲಾಗುತ್ತಿದೆ.

ಹಿರೇಹಳ್ಳ ಮೈದುಂಬಿ ಹರಿಯುತ್ತಿದೆ. ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಹಳ್ಳದ ದಂಡೆಯ ಜಮೀನುಗಳಿಗೆ ನೀರು ನುಗ್ಗಿದೆ.

ಪ್ರತಿಕ್ರಿಯಿಸಿ (+)