ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ, ಕುಷ್ಟಗಿ ಕಾಲೇಜುಗಳಿಗೆ ಪ್ರಶಸ್ತಿಯ ಗರಿ

ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ, ಪ್ರಶಸ್ತಿ ಗೆದ್ದ ಕ್ರೀಡಾಪಟುಗಳ ಸಂಭ್ರಮ
Last Updated 1 ಅಕ್ಟೋಬರ್ 2022, 15:56 IST
ಅಕ್ಷರ ಗಾತ್ರ

ಕೊಪ್ಪಳ: ಕುಷ್ಟಗಿಯ ಮರಿಶಾಂತವೀರ ಮಹಿಳಾ ಸ್ವಾತಂತ್ರ್ಯ ಪದವಿಪೂರ್ವ ಕಾಲೇಜಿನ ತಂಡದವರು, ನಗರದಲ್ಲಿ ಶನಿವಾರ ಮುಕ್ತಾಯವಾದ ಪದವಿಪೂರ್ವ ಕಾಲೇಜುಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಚಾಂಪಿಯನ್‌ ಆದರು.

ಫೈನಲ್‌ ಪಂದ್ಯದಲ್ಲಿ ಈ ಕಾಲೇಜು 4–3 ಅಂಕಗಳಿಂದ ಅಳವಂಡಿಯ ಸಿದ್ದೇಶ್ವರ ಪಿಯು ಕಾಲೇಜು ತಂಡವನ್ನು ಮಣಿಸಿತು. ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ಕೊಪ್ಪಳದ ಸರ್ಕಾರಿ ಪದವಿಪೂರ್ವ ಕಾಲೇಜು 25–13ರಲ್ಲಿ ಯಲಬುರ್ಗಾದ ಸರ್ಕಾರಿ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬಾಲಕರ ಷಟಲ್‌ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಗಂಗಾವತಿಯ ಬೆಸ್ಟ್‌ ಪಿಯು ಕಾಲೇಜು 25–23ರಲ್ಲಿ ಕೊಪ್ಪಳದ ಮರಿಶಾಂತವೀರ ಕಾಲೇಜು ಎದುರು, ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಕೊಪ್ಪಳದ ಶಾರದಾ ಪಿಯು ಕಾಲೇಜು 25–24ರಲ್ಲಿ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ನ ಎಂಎಂಡಿಆರ್‌ಎಸ್‌ ಕಾಲೇಜು ವಿರುದ್ಧವೂ ಗೆಲುವು ಪಡೆದು ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಬಾಲಕಿಯರ ವಿಭಾಗದ ಥ್ರೋ ಬಾಲ್‌ನಲ್ಲಿ ಕಾರಟಗಿಯ ತಾಲ್ಲೂಕಿನ ನವನಗರದ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಪಿಯು ಕಾಲೇಜು 23–20ರಲ್ಲಿ ಕುಕನೂರಿನ ಕೆಎಲ್‌ಇ ಕಾಲೇಜು ಎದುರು, ಬಾಲಕರ ವಿಭಾಗದಲ್ಲಿ ಮುನಿರಾಬಾದ್‌ನ ವಿಎನ್‌ಸಿ 25–20ರಲ್ಲಿ ಶ್ರೀರಾಮನಗರದ ಸರ್ಕಾರಿ ಪದವಿಪೂರ್ವ ಕಾಲೇಜು ತಂಡಗಳ ಎದುರು ಪ್ರಶಸ್ತಿ ಪಡೆದುಕೊಂಡಿತು.

5 ಕಿ.ಮೀ. ಗುಡ್ಡಗಾಡು ಓಟದಲ್ಲಿ ಮಂಗಳೂರಿನ ಸರ್ಕಾರಿ ಪಿಯು ಕಾಲೇಜಿನ ಮಹೇಶ ಬ್ಯಾಲಿ (ಪ್ರಥಮ), ಕುಕನೂರಿನ ಕೆಎಲ್‌ಇ ಕಾಲೇಜಿನ ಪ್ರವೀಣ ಸಿ. (ದ್ವಿತೀಯ), ಬಾಲಕರ ಚೆಸ್‌ನಲ್ಲಿ ಕೊಪ್ಪಳದ ಶಾರದಾ ಕಾಲೇಜಿನ ವಸಂತಕುಮಾರ್ (ಪ್ರಥಮ), ಗಂಗಾವತಿಯ ಕೆಂದೊಳ್ಳಿ ರಾಮಣ್ಣ ಪಿಯು ಕಾಲೇಜಿನ ಕುಣೀ ಋಷಿ (ದ್ವಿತೀಯ), ಬಾಲಕಿಯರ ವಿಭಾಗದ ಚೆಸ್‌ನಲ್ಲಿ ಕೊಪ್ಪಳದ ಮರಿಶಾಂತವೀರ ಕಾಲೇಜಿನ ಪವಿತ್ರಾ (ಪ್ರಥಮ), ಕಿಡದಾಳದ ಶಾರದಾ ಕಾಲೇಜಿನ ಭುವನೇಶ್ವರಿ (ದ್ವಿತೀಯ) ಪ್ರಶಸ್ತಿ ಜಯಿಸಿದರು.

ಅಥ್ಲೆಟಿಕ್ಸ್ ಫಲಿತಾಂಶ (ಬಾಲಕರ ವಿಭಾಗ): 100 ಮೀ.: ಓಟದಲ್ಲಿ ಕೊಪ್ಪಳದ ಎಸ್‌ಜಿ ಕಾಲೇಜಿನ ಮಂಜುನಾಥ ಬಿ–1, ಜಡೇಶ ಸ್ವಾಮಿ–2. 200ಮೀ.: ಜಯಂತ (ಗಂಗಾವತಿ ಬಾಲಕರ ಪಿಯು ಕಾಲೇಜು)–1, ಜಡೇಶ್ವರ ಸ್ವಾಮಿ (ಕೊಪ್ಪಳದ ಎಸ್‌ಜಿ ಕಾಲೇಜು)–2, 400 ಮೀ.: ಅನಿಲ್‌ ರಾಠೋಡ್‌ (ಕನಕಗಿರಿಯ ಬೆಸ್ಟ್‌ ಕಾಲೇಜು)–1, ಇಂದ್ರೇಶ್ (ಶ್ರೀರಾಮನಗರದ ಕಾಲೇಜು)–2, 800 ಮೀ.:ದೊಡ್ಡಬಸವ (ಕಾರಟಗಿಯ ಸಿಎಂಎಸ್‌ ಕಾಲೇಜು)–1, ಸತೀಶ್ (ಕೊಪ್ಪಳದ ಮರಿಶಾಂತವೀರ ಕಾಲೇಜು)–2.

5000 ಮೀ.: ಮಹೇಶ ಬ್ಯಾಳಿ (ಮಂಗಳೂರಿನ ಸರ್ಕಾರಿ ಕಾಲೇಜು)–1, ಗವಿಸಿದ್ದಪ್ಪ (ಕೊಪ್ಪಳದ ಸರ್ಕಾರಿ ಕಾಲೇಜು)–2, 110 ಮೀ. ಹರ್ಡಲ್ಸ್‌: ನಿಂಗರಾಜ್ (ಕೊಪ್ಪಳದ ಮರಿಶಾಂತವೀರ ಕಾಲೇಜು)–1, ಪ್ರದೀಪ ಬೂದುಗುಂಪಾ (ಮಂಗಳೂರಿನ ಸರ್ಕಾರಿ ಕಾಲೇಜು)–2, 4X100 ಮೀ. ರಿಲೆ: ಡಿ.ಎಂ. ಜಡಿಸ್ವಾಮಿ (ಕೊಪ್ಪಳದ ಎಸ್‌ಜಿ ಕಾಲೇಜು)–1, ಜಯಂತ್ (ಗಂಗಾವತಿಯ ಸರ್ಕಾರಿ ಕಾಲೇಜು) ಪ್ರಶಸ್ತಿ ಗೆದ್ದುಕೊಂಡರು.

ಬಾಲಕಿಯರ ವಿಭಾಗದ ಅಥ್ಲೆಟಿಕ್ಸ್ ಫಲಿತಾಂಶ

100 ಮೀ. ಓಟ: ಪವಿತ್ರಾ (ಕೊಪ್ಪಳ ಬಾಲಕಿಯರ ಕಾಲೇಜು)–1, ಐಶ್ವರ್ಯಾ (ಕನಕಗಿರಿ ಸರ್ಕಾರಿ ಕಾಲೇಜು)–2, 200 ಮೀ.: ಪವಿತ್ರಾ–1, ದ್ರಾಕ್ಷಾಯಿಣಿ (ಕುಕನೂರಿನ ವಿಜಿ ಕಾಲೇಜು)–2, 400 ಮೀ.: ಗೌರಮ್ಮ (ಗಂಗಾವತಿ ಎಂಎನ್‌ಎಂ ಕಾಲೇಜು)–1, ಮೇನಕಾ (ಕೊಪ್ಪಳದ ಜ್ಞಾನಬಂಧು ಕಾಲೇಜು)–2, 800 ಮೀ.: ನಾಗವೇಣಿ (ಹಿಟ್ನಾಳ ಸರ್ಕಾರಿ ಕಾಲೇಜು)–1, ಲಕ್ಷ್ಮಿದೇವಿ (ಬನ್ನಿಕೊಪ್ಪದ ಸರ್ಕಾರಿ ಕಾಲೇಜು)–2, 1500 ಮೀ.: ನಾಗವೇಣಿ–1, ಶಾಂತಾ (ಕಾರಟಗಿಯ ಶಾಂತಿ ಸ್ಫೂರ್ತಿ ಕಾಲೇಜು)–2.

3000 ಮೀ. ಓಟ: ನಾಗವೇಣಿ–1, ಇಂದಿರಾ (ಗಂಗಾವತಿ ಎಂಎನ್‌ಎಂ)–2, 3000 ಮೀ. ನಡಿಗೆ: ಅನುಪಮಾ ಭಜಂತ್ರಿ (ಇಟಗಿಯ ಮಹೇಶ ಪಿಯು ಕಾಲೇಜು),–1, ಅಶ್ವಿನಿ (ಹಿಟ್ನಾಳ ಸರ್ಕಾರಿ ಕಾಲೇಜು)–2, 100 ಮೀ. ಹರ್ಡಲ್ಸ್‌: ಅಮೃತಾ (ಭಾಗ್ಯನಗರದ ನವಚೇತನ ಕಾಲೇಜು)–1, ದ್ರಾಕ್ಷಾಯಿಣಿ (ಕುಕನೂರಿನ ವಿ.ಜಿ. ಕಾಲೇಜು)–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT