ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಂಪೂರ್ಣ ಲಸಿಕಾಕರಣದತ್ತ ಹೆಜ್ಜೆ

ಜಿಲ್ಲಾಡಳಿತದ ಬಾಗಿಲಲ್ಲಿಯೇ 7 ಸಾವಿರ ಜನರಿಗೆ ಲಸಿಕೆ
Last Updated 21 ಅಕ್ಟೋಬರ್ 2021, 8:09 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ವಿನೂತನ ಮತ್ತು ವಿಶಿಷ್ಟ ಮಾದರಿಗಳನ್ನು ಅನುಸರಿಸಿ ಕೋವಿಡ್‌ ಲಸಿಕಾ ಕಾರ್ಯಕ್ರಮ ಯಶಸ್ವಿಯತ್ತ ದಾಫುಗಾಲು ಇಟ್ಟಿದೆ.

‘ಕೋವಿಡ್‌ ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಜಿಲ್ಲಾಡಳಿತ ಭವನ ಪ್ರವೇಶ’ ಎಂಬ ಎಚ್ಚರಿಕೆ ಜೊತೆಗೆ ಆರಂಭಿಸಿದ ಲಸಿಕಾ ಕಾರ್ಯಕ್ರಮದಲ್ಲಿ 7 ಸಾವಿರ ಜನರು ಲಸಿಕೆ ಪಡೆದು ಕೊಂಡಿದ್ದು,ಜನರ ಗಮನ ಸೆಳೆದಿದೆ.

ಆರಂಭದಲ್ಲಿ ಈ ಕ್ರಮ ಟೀಕೆಗೆ ಗುರಿಯಾಗಿತ್ತು. ‘ಜನರ ಅವಶ್ಯಕ ಕೆಲಸಗಳಿಗೆ ಅಡ್ಡಿ ಪಡಿಸಬಾರದು’ ಎಂದು ಕೆಲವು ಮುಖಂಡರು, ಸಂಘಟನೆಗಳು ಒತ್ತಾಯಿಸಿದ್ದವು.ಇದಕ್ಕೆ ಸ್ಪಷ್ಟೀಕರಣ ನೀಡಿದ ಜಿಲ್ಲಾಡಳಿತ ‘ಜನರ ಕೆಲಸ ಮಾಡಿಕೊಡಲು ಅಲ್ಲಿಯೇ ಪತ್ಯೇಕ ಕೌಂಟರ್‌ ತೆರೆಯಲಾಗಿದೆ. ಅಧಿಕಾರಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು’ ಎಂದು ತನ್ನ ಬಿಗಿ ನಿಲುವು ಪ್ರದರ್ಶನ ಮಾಡಿತು. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು ಅನಿವಾರ್ಯವಾಗಿ ಲಸಿಕೆ ಪಡೆದುಕೊಳ್ಳುವಂತಾಯಿತು.

ಇದಕ್ಕಾಗಿ ಕಚೇರಿ ಸಮಯದಲ್ಲಿಯೇ ಭವನದ ಎಲ್ಲ ಬಾಗಿಲುಗಳನ್ನು ಬಂದ್‌ ಮಾಡಿ ಪ್ರವೇಶದ್ವಾರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಯಿತು. ಪಕ್ಕದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಇದು ನಿತ್ಯ ಜನರ ಜೊತೆ ವಾಗ್ವಾದಕ್ಕೆ ಕಾರಣವಾದರೂ ಪಟ್ಟಬಿಡಿದ ಸಿಬ್ಬಂದಿ ಲಸಿಕೆ ಹಾಕಿಸಿ ಕೊಂಡವರು ಪ್ರಮಾಣ ಪತ್ರ ತೋರಿಸಿದರೆಮಾತ್ರ ಒಳಗೆ ಪ್ರವೇಶ ನೀಡಲಾಯಿತು.

ಲಸಿಕೆ ಕುರಿತು ಅನಗತ್ಯ ಭಯ, ಗ್ರಾಮೀಣ ಜನರಿಗೆ ಮಾಹಿತಿ ಕೊರತೆ ಯಿಂದ ತೊಂದರೆಯಾದರೂ ಆರೋಗ್ಯದ ಜಾಗೃತಿ ಹಿನ್ನೆಲೆಯಲ್ಲಿ ಲಸಿಕೆ ನೀಡಿ ನಿಟ್ಟುಸಿರು ಬಿಡುವಂತೆ ಆಗಿದೆ. ಅಲ್ಲದೆ ಶೇ 100ರಷ್ಟು ಸಾಧನೆಗೆ ಕೆಲವೇ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಜಿಲ್ಲೆಯ ಜನಸಂಖ್ಯೆ ಸುಮಾರು 16 ಲಕ್ಷ ಇದೆ. ಅದರಲ್ಲಿ 18 ವರ್ಷ ಮೇಲ್ಟಟ್ಟವರು 10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಇದ್ದಾರೆ. 4 ಲಕ್ಷ ಮಕ್ಕಳು 18 ವರ್ಷದ ಒಳಗಿನವರು. ಜನರಿಗೆ ಲಸಿಕೆ ನೀಡಲು ಸ್ವತಃ ಜಿಲ್ಲಾಧಿಕಾರಿಯೇ ವಿವಿಧ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಜಿಲ್ಲೆಗೆ 18 ವರ್ಷ ಮೇಲ್ಪಟ್ಟ 10,78,000 ಸಾವಿರ ಜನರಿಗೆ ಎರಡು ಡೋಸ್‌ ಲಸಿಕೆ ನೀಡುವ ಗುರಿ ನೀಡ ಲಾಗಿತ್ತು. ಅದರಲ್ಲಿ 10,40,000 ಜನರಿಗೆ ಲಸಿಕೆ ನೀಡುವ ಮೂಲಕ
ಶೇ 100 ಸಾಧನೆಯತ್ತ ಕಾಲಿಡುತ್ತಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರ: ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಪಂದಿಸುವ ಮೂಲಕ ಅಭಿಯಾನ ಯಶಸ್ವಿಗೆ ಕಾರಣರಾಗಿದ್ದಾರೆ. ಗೌರಿ ಗಣೇಶ ಹಬ್ಬ, ನವರಾತ್ರಿ, ಈದ್‌ ಮಿಲಾದ್ ಸೇರಿದಂತೆ ದೊಡ್ಡ, ದೊಡ್ಡ ಹಬ್ಬಗಳಲ್ಲಿ ವಿವಿಧ ಸಂಘಟನೆ, ಧರ್ಮ, ಜಾತಿಯ ಮುಖಂಡರು ಲಸಿಕಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಡಳಿತದ ಕಾರ್ಯಕ್ಕೆ ಸಾಥ್‌ ನೀಡಿರುವುದು ಅಭಿಯಾನಕ್ಕೆ ಯಶಸ್ಸು
ದೊರೆಯುವಂತೆ ಆಗಿದೆ.

*ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಎರಡು ಲಸಿಕೆಯನ್ನು ಲಕ್ಷಾಂತರ ಜನರಿಗೆ ನೀಡಲಾಗಿದೆ. ಜನತೆ ಅನಗತ್ಯ ಭಯಪಡದೇ ಲಸಿಕೆ ಹಾಕಿಸಿಕೊಂಡು ಕೋವಿಡ್‌ ಸೋಂಕಿಗೆ ಮುಕ್ತಿ ನೀಡಬೇಕು. ಅಭಿಯಾನಕ್ಕೆ ಜನತೆ ಸಹಕಾರ ಕೂಡಾ ನೀಡಿದ್ದಾರೆ

- ವಿಕಾಸ್‌ ಕಿಶೋರ್‌ ಸುರಳ್ಕರ್, ಜಿಲ್ಲಾಧಿಕಾರಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT