ಕುಕನೂರು: ಪಟ್ಟಣದ ಹಳೆ ನಾಡ ಕಾರ್ಯಾಲಯ ಮುಂಭಾಗದಲ್ಲಿ ಇತ್ತೀಚೆಗೆ ಅಂಗಡಿ ತೆರೆವುಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಚಿಕ್ಕದಾಗಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಪ.ಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ವ್ಯಾಪಾರಿ ಈಶಯ್ಯ ಶಿರೂರಮಠ ಮಾತನಾಡಿ, ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಕನೂರರಿಂದ ಯಲಬುರ್ಗಾ ರಸ್ತೆಯಲ್ಲಿ ಹಳೆ ಕಾರ್ಯಾಲಯ ಮುಂಭಾಗದಲ್ಲಿ ಸುಮಾರು ವರ್ಷಗಳಿಂದಲೂ ಮುಂಚಿತವಾಗಿ ಅಂಗಡಿಕಾರರು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ನಾಲ್ಕೈದು ದಿನಗಳ ಹಿಂದೆ ಅಂಗಡಿಗಳ ತೆರವು ಕಾರ್ಯ ಮಾಡಿದ್ದೀರಿ, ಆದರೆ ಅಂಗಡಿಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ, ಅಂಗಡಿಕಾರರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮಾತಿಗೆ ಮಣಿದು ನಾವು ಅಂಗಡಿ ತೆರವು ಕಾರ್ಯ ಮಾಡಿಕೊಂಡಿದ್ದೇವೆ. ಆದರೆ ತಾವು ನಮಗೆ ನಾವಿದ್ದ ಜಾಗದಲ್ಲಿಯೇ ಸ್ವಲ್ಪ ಜಾಗಾವಕಾಶ ಮಾಡಿಕೊಟ್ಟು, ಅಂಗಡಿ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ವ್ಯಾಪಾರಿಗಳಾದ ಪ್ರವೀಣದಾಸ, ಜೆ.ಕೆ ಟೈಲರ್, ರಾಜಾಸಾಬ್, ಬಸವರೆಡ್ಡಿ, ಪವಿತ್ರಾ, ಪ್ರವೀಣ, ಸಿಕಂದರ್, ನವೀನ, ಸಂಗಯ್ಯ ದ್ಯಾಂಪೂರು, ಹುಸೇನಸಾಬ್, ಮಹೆಬೂಬಸಾಬ್ ಗುಡಿಹಿಂದಲ್, ಸುಭಾಷ ಸದರಿ, ವಿರಾಜ್ ಹಡಪದ, ಹುಸೇನಬಾಷಾ ಕೊಪ್ಪದ, ಮಂಜುನಾಥ ಮಾಲಗಿತ್ತಿ, ಶಿವಪ್ಪ, ಮುತ್ತಪ್ಪ ಸಂಗನಾಳ, ವೀರಯ್ಯ ಬಂಡಿ, ಶೇಖಪ್ಪ ದ್ಯಾಂಪೂರು, ಮದರಷಾ ಮಕಾಂದರ್ ಇತರರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-35-528245151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.