ಕುಕನೂರು: ‘ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ತಾಲ್ಲೂಕಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಾರ್ವಜನಿಕರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಮಹನೀಯರ ಜಯಂತಿಯನ್ನು ಏಪ್ರಿಲ್ 14ರಂದು ಅತ್ಯಂತ ಅದ್ದೂ ರಿಯಾಗಿ ಆಚರಿಸಲಾಗುವುದು. ಮಹಾನ್ ಪುರುಷರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವಂತೆ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡೋಣ’ ಎಂದು ಹೇಳಿದರು.

ದಲಿತ ಮುಖಂಡ ರಾಮಣ್ಣ ಬಂಕದಮನಿ ಮಾತನಾಡಿ,‘ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಎಷ್ಟು ಇದಿಯೋ? ಅಷ್ಟೇ ಜವಾಬ್ದಾರಿ ಸಮಾಜದ ಮುಖಂಡರದ್ದೂ ಇದೆ. ನಾವು ಸ್ವಯಂ ಪ್ರೇರಿತರಾಗಿ ನಮ್ಮ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ನಮ್ಮಗಳ ಜವಾಬ್ದಾರಿಯನ್ನು ನಿರ್ವಹಿಸಿದರೆ, ಅಚ್ಚುಕಟ್ಟಾಗಿ ಮಹಾನ್ ನಾಯಕರ ಜಯಂತಿಯನ್ನು ಆಚರಿಸಿದಂತಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಸಂತೋಷ ಪಾಟೀಲ ಬಿರಾದಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಸಕ್ರಿ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಯಮನೂರಪ್ಪ ಗೋರ್ಲೆಕೊಪ್ಪ, ಶಿವಪ್ಪ ಭಂಡಾರಿ, ಬಸವರಾಜ ಬೂದುಗುಂಪ, ಮಧು ಕಲ್ಮನಿ, ರಾಮಣ್ಣ ಭಜಂತ್ರಿ, ಲಕ್ಷ್ಮಣ್ ಕಾಳಿ, ಜುಂಜಪ್ಪ ಸಾಲ್ಮನಿ, ಮಲಿಯಪ್ಪ ಅಣ್ಣಿಗೇರಿ, ಬಸವರಾಜ ಜಂಗ್ಲಿ, ನಾಗಪ್ಪ ಕಲ್ಮನಿ, ರುದ್ರಪ್ಪ ಭಂಡಾರಿ, ಶರಣಪ್ಪ ಹಿರೇಮನಿ, ರಮೇಶ್ ಶಾಸ್ತ್ರಿ, ಪಕ್ಕಪ್ಪ ಸಾಲ್ಮನಿ, ಮಹೇಶ್ ದೊಡ್ಡಮನಿ, ಶಂಕರ ಭಂಡಾರಿ, ನಿಂಗಪ್ಪ ಗೋರ್ಲೆಕೊಪ್ಪ, ರಾಘವೇಂದ್ರ ಕಾತರಕಿ, ಈಶಪ್ಪ ಶಿರೂರು ಹಾಗೂ ಶ್ರೀಧರ ಭಂಡಾರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-35-426342154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.