ಕುಕನೂರು: ‘ಪಟ್ಟಣದಲ್ಲಿ ಕೈಗೊಂಡಿರುವ ಅಮೃತ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಾಗೇಶ ಹೇಳಿದರು.

ಪಟ್ಟಣದ ಪ್ರವಾಸಿ ಮಂದರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಆಮೆಗತಿ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲಿ ರಸ್ತೆ ಅಗೆಯುವುದು ನಮ್ಮ ಪಟ್ಟಣ ಪಂಚಾಯಿತಿಯ ಕುಡಿಯುವ ನೀರಿನ ಪೈಪ್ಲೈನ್ಗಳನ್ನು ಒಡೆಯುವುದು, ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತದೆ. ಕಾಮಗಾರಿಯನ್ನು ತಕ್ಷಣ ಮುಗಿಸಬೇಕು’ ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲು ಚೌದ್ರಿ ಮಾತನಾಡಿ, ‘ತಮ್ಮ ವಾರ್ಡ್ನಲ್ಲಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಕೇಳಿದ್ದಕ್ಕೆ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸಭೆ ನಡೆಯುವಾಗಲೇ ಕಚೇರಿಗೆ ಬಂದ ಸದಸ್ಯ ಶಿವರಾಜಗೌಡ ಯಲ್ಲಪ್ಪಗೌಡ ವಾರ್ಡ್ನ ನಿವಾಸಿಗಳು, ತಮ್ಮ ವಾರ್ಡ್ನಲ್ಲಿರುವ ಸ್ವಚ್ಛತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಗೇಶ, ನಿಮ್ಮ ವಾರ್ಡ್ಗೆ ಭೇಟಿ ನೀಡಿ, ಪರಿಹರಿಸುತ್ತೇನೆ ಎಂದು ಭರವಸೆ ನೀಡಿದಾಗ ನಿವಾಸಿಗಳು ಮರಳಿದರು.

ಕುಡಿಯುವ ನೀರು, ಮಳಿಗೆಗಳ ಟೆಂಡರ, ಪಟ್ಟಣದ ಸ್ವಚ್ಛತಾ ಕಾರ್ಯ, ಅಕ್ರಮ ಕಟ್ಟಡಗಳ ತೆರವು, ಅಕ್ರಮ ಜಾಗ ದಾಖಲಾತಿ ಪರಿಶೀಲನೆ ಹೀಗೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೀಲಾವತಿ ಮುಧೋಳ, ಉಪಾಧ್ಯಕ್ಷ ಮಂಜುಳಾ ಕಲ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ, ರಾಮಣ್ಣ ಬಂಕದಮನಿ, ಗಗನ ನೋಟಗಾರ, ಶಿವರಾಜ ಯಲ್ಲಪ್ಪಗೌಡ್ರು, ಲಲಿತಮ್ಮ ಯಡಿಯಾಪುರ, ಸಿದ್ದು ಉಳ್ಳಾಗಡ್ಡಿ, ಮಂಜುನಾಥ ಕೋಳೂರು, ಮಲ್ಲು ಚೌದ್ರಿ, ಲಕ್ಷ್ಮಿ ಸಬರದ, ರಫಿ ಹಿರೇಹಾಳ, ಬಾಲರಾಜ್ ಗಾಳಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-1360118776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.