ಕುಕನೂರು: 47 ವರ್ಷಗಳ ಇತಿಹಾಸ ಹೊಂದಿರುವ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸ್ವಂತ ಕಟ್ಟಡ, ಮೂಲಸೌಕರ್ಯ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.

ತಾಲ್ಲೂಕು ಕೇಂದ್ರ ಗ್ರಂಥಾಲಯವೂ ಪ್ರಸ್ತುತ ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕಳೆದ ಒಂದು ತಿಂಗಳಿನಿಂದ ನಿಯಮಿತವಾಗಿ ತೆರೆಯದಿರುವುದರಿಂದ ಓದುಗರಿಗೆ ಉಪಯೋಗವಾಗದೆ ಉಳಿದಿದೆ. ಸಾವಿರಾರು ಪುಸ್ತಕಗಳು ಬಳಕೆಯಾಗದೆ ದೂಳು ಹಿಡಿಯುತ್ತಿದೆ.

ಗ್ರಂಥಾಲಯ ಇರುವ ಸ್ಥಳದಲ್ಲಿ ಕನಿಷ್ಠ ಸೂಚನಾ ಫಲಕವೂ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

1979ರಲ್ಲಿ ಆರಂಭವಾದ ಈ ಗ್ರಂಥಾಲಯವು 2000ರವರೆಗೆ ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಆ ಕಟ್ಟಡವನ್ನು ಧ್ವಂಸಗೊಳಿಸಿದ ನಂತರ ಕಳೆದ ಐದು ವರ್ಷಗಳಿಂದ ತಾತ್ಕಾಲಿಕವಾಗಿ ಮಠದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಶಾಶ್ವತ ವ್ಯವಸ್ಥೆ ಇನ್ನೂ ರೂಪುಗೊಂಡಿಲ್ಲ.

ಗ್ರಂಥಾಲಯದಲ್ಲಿ ಸುಮಾರು 15,700 ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಸೇರಿ 12 ದಿನಪತ್ರಿಕೆ, 6 ಮಾಸಪತ್ರಿಕೆಗಳು ಬರುತ್ತವೆ. ಸೂಮಾರು 850 ಸದಸ್ಯರಲ್ಲಿ ಕೇವಲ 50 ಜನರು ಮಾತ್ರ ಸಕ್ರಿಯರಾಗಿದ್ದು, ದಿನನಿತ್ಯ 20–25 ಜನ ಮಾತ್ರ ಭೇಟಿ ನೀಡಿ ಓದುತ್ತಾರೆ. ನಿಯೋಜನೆಯಲ್ಲಿದ್ದ ಗ್ರಂಥಾಲಯ ಪಾಲಕರು ರಜೆ ಮೇಲೆ ತೆರಳಿರುವುದರಿಂದ ಸಿಬ್ಬಂದಿ ಕೊರತೆಗೆ ಗ್ರಂಥಾಲಯ ಕಾರ್ಯಾಚರಣೆ ಸ್ಥಗಿತಗೊಂಡಂತಾಗಿದೆ.

ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಯುವಕರು ಅಗತ್ಯ ಪುಸ್ತಕಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಂಥಾಲಯವನ್ನು ತಕ್ಷಣ ಪುನರಾರಂಭಿಸಬೇಕು, ಜಿಲ್ಲಾಧಿಕಾರಿಗಳ ಸೂಚನೆಯಂತೆ ವೊಚರ್ ಆಧಾರದ ಮೇಲೆ ತಾತ್ಕಾಲಿಕ ಸಿಬ್ಬಂದಿ ನೇಮಿಸಬೇಕು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-35-51435411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.