ಕುಕನೂರು: ಪಟ್ಟಣದ ಪ್ರಮುಖ ಮಾರ್ಗ ಡಾ.ಅಂಬೇಡ್ಕರ್ ವೃತ್ತದಿಂದ ವಿದ್ಯಾನಂದ ಗುರುಕುಲ ಶಾಲೆಯವರೆಗೆ ದೂಳಿನ ಸಮಸ್ಯೆಯಿದ್ದು, ಸದ್ಯ ಇರುವ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರು ಹಾಕಿಸಬೇಕು ಎಂದು ಆಗ್ರಹಿಸಿ ಹಿತರಕ್ಷಣಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಸ್ತೆ ಮೇಲೆ ಹೆಚ್ಚುತ್ತಿರುವ ದೂಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಜತೆಗೆ ರಸ್ತೆ ಸುತ್ತಮುತ್ತ ಶಾಲೆಗಳು ಹಾಗೂ ವಸತಿ ಪ್ರದೇಶಗಳು ಇರುವುದರಿಂದ ಪ್ರತಿದಿನ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಸಂಚರಿಸುತ್ತಾರೆ. ಆದರೆ ವಾಹನ ಸಂಚಾರದ ಪರಿಣಾಮದಿಂದಾಗಿ ರಸ್ತೆ ಮೇಲೆ ದೂಳು ಹೆಚ್ಚಿದ್ದು, ಕಣ್ಣಿನ ಸಮಸ್ಯೆಗಳು, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕವ್ಯಕ್ತವಾಗಿದೆ. ಹೀಗಾಗಿ ರಸ್ತೆಯನ್ನು ಡಾಂಬರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಂಜುನಾಥ ನಾಡಗೌಡ್ರು, ಅಂದಪ್ಪ ಜವಳಿ, ಕಳಕೇಶ ಹತ್ತಿಕಟಗಿ, ರಾಮನಗೌಡ ಅರಿಶಿನಬಿಡಿ, ವೀರೇಶ ಸಬರದ, ಗಂಗಾಧರ ನಾರಾಯಣಿ, ಚಂದ್ರು ಬಗನಾಳ ಸೇರಿದಂತೆ ಹಲವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-35-1072691076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.