37 ಕ್ಷೇತ್ರಕ್ಕೆ ಮಾತ್ರ ಮುಖ್ಯಮಂತ್ರಿ: ಶೋಭಾ ಲೇವಡಿ

7
ಬಿಜೆಪಿ ಕಾರ್ಯಕರ್ತರ ಸಭೆ:

37 ಕ್ಷೇತ್ರಕ್ಕೆ ಮಾತ್ರ ಮುಖ್ಯಮಂತ್ರಿ: ಶೋಭಾ ಲೇವಡಿ

Published:
Updated:
Deccan Herald

ಕೊಪ್ಪಳ: ’ರಾಜ್ಯದ ಜನರ ಹಿತ ಮರೆತು, ಉತ್ತರ ಮತ್ತು ದಕ್ಷಿಣ ಎಂಬ ಬೇಧ ಮೂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ 37 ಕ್ಷೇತ್ರಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಉಡುಪಿ-ಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.

ನಗರದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಧರ್ಮದ ಮೂಲಕ ಜನತೆಯನ್ನು ಇಬ್ಭಾಗಿಸಲು ಹೊರಟ ಸಿದ್ದರಾಮಯ್ಯ ಮೂಲೆ ಸೇರಿದ್ದಾರೆ. ರಾಜ್ಯವನ್ನು ವಿಭಜಿಸಲು ಹೊರಟಿರುವ ಕುಮಾರಸ್ವಾಮಿ ಶೀಘ್ರದಲ್ಲಿಯೇ ಅಧಿಕಾರ ಕಳೆದುಕೊಂಡು ಮನೆಗೆ ಹೋಗುತ್ತಾರೆ’ ಎಂದು ಹೇಳಿದರು.

ಅಧಿಕಾರ ಹಿಡಿದು ಮೂರು ತಿಂಗಳು ಕಳೆಯುತ್ತಾ ಬಂದರೂ ಒಂದೇ ಒಂದು ಅಭಿವೃದ್ಧಿ ಕಾರ್ಯವಾಗಿಲ್ಲ. ರೆಸಾರ್ಟ್ ರಾಜಕಾರಣ, ಸಚಿವರ ನೇಮಕ, ಜಿಲ್ಲಾ ಉಸ್ತುವಾರಿಗಳ ನೇಮಕ ಇದರಲ್ಲಿಯೇ ಕಾಲಹರಣ ಮಾಡಿದ್ದಾರೆ. ಜನರ ಭಾವನೆಗೆ ಅಗೌರವ ತೋರಿ ಕೇವಲ ಅಲ್ಪಸ್ಥಾನ ಗಳಿಸಿದ ಜೆಡಿಎಸ್ ಮುಂದೆ ಮಂಡೆಯೂರಿದ ಕಾಂಗ್ರೆಸ್‌ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡುತ್ತೇವೆ ಎಂದು ಹೇಳುತ್ತಾರೆ. ಬೆಂಗಳೂರಿನಲ್ಲಿ ದೋಸ್ತಿ ಮಾಡಿಕೊಳ್ಳುತ್ತಾರೆ. ಇದರ ಅರ್ಥ ರಾಜ್ಯವನ್ನು ಲೂಟಿ ಹೊಡೆಯುವುದಲ್ಲದೇ ಮತ್ತೇನು ಅಲ್ಲ ಎಂದು ಛೇಡಿಸಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ. ಅರ್ಧ ಶತಮಾನ ಆಳಿದರೂ ಭಾರತದ ಹೆಸರನ್ನು ಕಾಂಗ್ರೆಸ್ ವಿದೇಶಗಳಲ್ಲಿ ಉಳಿಸಲಿಲ್ಲ. ಕೇವಲ ನಾಲ್ಕು ವರ್ಷದಲ್ಲಿ ಮೋದಿ ದೇಶವನ್ನು 130ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂದರು.

ಆದರೆ ರಾಜ್ಯದ ಅಭಿವೃದ್ಧಿಗೆ ದ್ರೋಹ ಬಗೆದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬುವುದನ್ನು ಅರಿತು ಅನೈತಿಕ ಹೊಂದಾಣಿಕೆ ಮಾಡಿಕೊಂಡಿವೆ ಹೊರತು ಯಾವುದೇ ಘನ ಉದ್ದೇಶ ಸಾಧಿಸಲು ಅಲ್ಲ ಎಂದು ಹೇಳಿದರು.

ಕೊಪ್ಪಳ ಏತನೀರಾವರಿ ಯೋಜನೆಗೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಡಿಗಲ್ಲು ಹಾಕಲಾಗಿತ್ತು. ಆಗ ಸಾವಿರ ಕೋಟಿ ರೂಪಾಯಿ ಇದ್ದ ಮೊತ್ತ ಈಗ ಒಂಬತ್ತು ಸಾವಿರ ಕೋಟಿಗೆ ಏರಿಕೆಯಾಗಿದೆ. ಇನ್ನೂ ನೀರಾವರಿ ಯೋಜನೆ ಮುಗಿದಿಲ್ಲ. ಕೃಷ್ಣಾ ಕೊಳ್ಳದ ಯೋಜನೆಯನ್ನು ಪೂರ್ತಿಗೊಳಿಸಲಿಲ್ಲ. ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ, ಅಧಿಕಾರ ಪಡೆದು ಜನತೆಗೆ ಸಿದ್ದರಾಮಯ್ಯ ಮೋಸ ಮಾಡಿದರು ಟೀಕಿಸಿದರು.

ಸಂಸದ ಸಂಗಣ್ಣ ಕರಡಿ, ಶಾಸಕರಾ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ನಾಗಪ್ಪ ಸಾಲೋಣಿ, ಮಾಜಿ ಶಾಸಕ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ, ಮುಖಂಡರಾದ ಸಿ.ವಿ.ಚಂದ್ರಶೇಖರ, ಅಮರೇಶ ಕರಡಿ, ಡಾ.ಕೆ.ಜಿ.ಕುಲಕರ್ಣಿ, ಚಂದ್ರಶೇಖರ ಕವಲೂರ, ಚಂದ್ರಶೇಖರಗೌಡ ಪಾಟೀಲ, ಗವಿಸಿದ್ದಪ್ಪ ಕರಡಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !