ಕುಷ್ಟಗಿ: ತಾಲ್ಲೂಕಿನ ಅಡವಿಭಾವಿ ಸೀಮಾಂತರದಲ್ಲಿ ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಗಳು ಅವೈಜ್ಞಾನಿಕ ಮತ್ತು ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

ಲೋಕೋಪಯೋಗಿ ಇಲಾಖೆಯ ಇಲ್ಲಿಯ ಉಪವಿಭಾಗ ಈ ಕಾಮಗಾರಿ ನಿರ್ವಹಿಸುತ್ತಿದೆ. ಆದರೆ ಕಾಮಗಾರಿ ಅಗತ್ಯಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ, ತರಾತುರಿಯಲ್ಲಿ ಕಳಪೆ ಕಾಮಗಾರಿ ನಿರ್ವಹಿಸಲಾಗುತ್ತಿದೆ, ಹಳ್ಳಕ್ಕೆ ಪ್ರವಾಹದ ನೀರು ಬರುವುದು ಒಂದು ಕಡೆಯಾದರೆ ನೀರಿನ ಒತ್ತಡ ಇಲ್ಲದ ಕಡೆ ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳಪೆ ಸಿಮೆಂಟ್ ಮತ್ತು ಮರಳು ಬಳಕೆ ಮಾಡಲಾಗಿದೆ. ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಇಲಾಖೆಯ ಎಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತ ಮುಖಂಡ ಮಲ್ಲಿಕಾರ್ಜುನ ದೋಟಿಹಾಳ ದೂರಿದ್ದಾರೆ.

ಯಾವುದೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಯೋಜನೆ, ಬಳಕೆಯಾಗುವ ಅನುದಾನ, ಇಲಾಖೆ ಮತ್ತು ವಿನ್ಯಾಸ ಸಹಿತ ಮಾಹಿತಿಯುಳ್ಳ ಫಲಕವನ್ನು ಅಳವಡಿಸುವುದು ಕಡ್ಡಾಯ. ಆದರೆ ಇಲಾಖೆ ಅಧಿಕಾರಿಗಳಿಂದ ಇಲ್ಲಿ ಪಾರದರ್ಶಕತೆ ವ್ಯಕ್ತವಾಗಿಲ್ಲ ಎಂದಿದ್ದಾರೆ.

ಹಳ್ಳ ದೊಡ್ಡದಾಗಿದ್ದು ಹೆಚ್ಚು ಮಳೆಯಾದಾಗ ಹುಲ್ಸಗೇರಿ, ಚಳಗೇರಿ, ಅಡವಿಭಾವಿ ಈ ಮೂರು ಸೀಮಾಂತರಗಳಿಂದ ಅತಿ ಹೆಚ್ಚು ನೀರು ಹರಿದು ಬಂದು ಪ್ರವಾಹ ಉಕ್ಕೇರುತ್ತದೆ. ಕೆಲ ವರ್ಷಗಳ ಹಿಂದೆ ಇದೇ ಹಳ್ಳದ ಪ್ರವಾಹಕ್ಕೆ ಚಕ್ಕಡಿ, ಜನ ಜಾನುವಾರು ಕೊಚ್ಚಿಹೋಗಿದ್ದು ಇನ್ನೂ ನೆನಪು ಮಾಸಿಲ್ಲ. ನೀರಿನ ಹರಿವು ಹೆಚ್ಚಿರುವ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಸೇತುವೆ ನಿರ್ಮಿಸಿದರೆ ಸೂಕ್ತವಾಗಿರುತ್ತಿತ್ತು. ಆದರೆ ಅಧಿಕಾರಿಗಳು ಎಲ್ಲ ವಿಷಯವನ್ನೂ ಗೋಪ್ಯವಾಗಿರಿಸಿ ಮನಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಕೆಲವೇ ಲಕ್ಷಗಳಲ್ಲಿ ಮುಗಿಯುವ ಕಾಮಗಾರಿಗೆ ಕೋಟಿಗಟ್ಟಲೇ ಹಣ ಸುರಿಯುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಈ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗುರುರಾಜ್ ಪ್ರತಿಕ್ರಿಯಿಸಿ ‘₹2 ಕೋಟಿ ಮೊತ್ತದಲ್ಲಿ ಒಟ್ಟು ಮೂರು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು. ಆದರೆ ಗುಣಮಟ್ಟ, ಸಾರ್ವಜನಿಕರ ಆಕ್ಷೇಪ ಮತ್ತು ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಮೇಲಧಿಕಾರಿಗಳೇ (ಎಇಇ) ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-35-1887266972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.