ಕುಷ್ಟಗಿ: ಬೈಕ್ ಪಕ್ಕಕ್ಕೆ ಸರಿಸಿ ಎಂದದ್ದಕ್ಕೆ ಇಲ್ಲಿಯ ಬಿಜೆಪಿ ಮುಖಂಡ ಪೊಲೀಸರನ್ನು ರಸ್ತೆಯಲ್ಲೇ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದ ಘಟನೆ ಮಂಗಳವಾರ ನಡೆದಿದೆ ಎನ್ನಲಾಗಿದೆ.

ಪಟ್ಟಣದ ಮಾರುತಿ ವೃತ್ತದ ಬಳಿ ಕರ್ತವ್ಯ ನಿರತರಾಗಿದ್ದ ಮಾಜಿ ಯೋಧರಾಗಿರುವ ಪೊಲೀಸ್ ಕಾನ್ಸ್ಟೆಬಲ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ತೆಗೆಯುವಂತೆ ಹೇಳಿದ್ದಾರೆ. ಅಷ್ಟಕ್ಕೆ ಕುಪಿತಗೊಂಡ ಪ್ರಭುಶಂಕರಗೌಡ ಪಾಟೀಲ ಎಂಬುವವರು ಅವಾಚ್ಯ ಪದಗಳಿಂದ ಬೈಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಪೊಲೀಸರಿಗೆ ದೂರವಾಣಿ ಕರೆ ಮಾಡಿದ ಬಿಜೆಪಿಯ ಇನ್ನೊಬ್ಬ ವ್ಯಕ್ತಿ,‘ಏನಾಗುತ್ತದೆಯೊ ಆಗಲಿ ನಾವೂ ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆಯೊಡ್ಡಿದ್ದರು ಎಂಬುದನ್ನು ಪೊಲೀಸ್ ಮೂಲಗಳು ತಿಳಿಸಿವೆ. ನಿಂದನೆಗೆ ಒಳಗಾದ ಕಾನ್ಸ್ಟೆಬಲ್ ಎಫ್ಐಆರ್ ದಾಖಲಿಸುವಂತೆ ಹಿರಿಯ ಅಧಿಕಾರಿಗಳ ಮುಂದೆ ಪಟ್ಟು ಹಿಡಿದಿದ್ದರು. ಆದರೆ, ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಲಾಗಿದೆ.

ಮೇಲಧಿಕಾರಿಗಳ ಸೂಚನೆಯಂತೆ ಕರ್ತವ್ಯ ನಿಷ್ಠೆ ಮೆರೆದ ಸಿಬ್ಬಂದಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದಿಗಿಲುಗೊಂಡ ಬಿಜೆಪಿಯ ಕೆಲ ಪ್ರಮುಖರು ಪೊಲೀಸ್ ಠಾಣೆಗೆ ದೌಡಾಯಿಸಿ ಪ್ರಕರಣ ದಾಖಲಿಸದಂತೆ ಮನವಿ ಮಾಡುವುದರ ಜೊತೆಗೆ ಪರೋಕ್ಷ ಒತ್ತಡವನ್ನೂ ಹೇರಿದ್ದರು ಎಂಬುದು ತಿಳಿದಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸರ್ಕಲ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ,‘ಘಟನೆ ನಡೆದದ್ದು ನಿಜ, ಆದರೆ, ಆವೇಶದಲ್ಲಿ ಕಾನ್ಸ್ಟೆಬಲ್ ಅನ್ನು ನಿಂದಿಸಿದ್ದು ಆಕಸ್ಮಿಕ, ಉದ್ದೇಶಪೂರ್ವಕ ಅಲ್ಲ ಎಂಬುದು ತಿಳಿಯಿತು. ಅಲ್ಲದೆ ಇಂಥ ವರ್ತನೆ ಮರುಕಳಿಸಿದರೆ ಯಾವುದೇ ಕಾರಣಕ್ಕೂ ಕ್ರಮ ಜರುಗಿಸದೆ ಇರಲು ಸಾಧ್ಯವಿಲ್ಲ ಎಂಬುದನ್ನು ಠಾಣೆಗೆ ಬಂದಿದ್ದ ಕೆಲ ಮುಖಂಡರ ಮೂಲಕ ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ಪ್ರಕರಣ ದಾಖಲಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-35-685724164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.