ಕುಷ್ಟಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡೆಕೊಪ್ಪ ಸೀಮಾಂತರದಲ್ಲಿ ಪಾನ್ಬೀಡಾ ಅಂಗಡಿ ಮೇಲೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಇಲ್ಲಿಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ದಿಲ್ವಾಘಸಿಂಗ್ ಮೇಹರ್ಸಿಂಗ್ ಮತ್ತು ಪತ್ನಿ ರವೀಂದ್ರಕೌರ್ ಎಂಬುವರು ಬಂಧಿತರು. ಆರೋಪಿಗಳ ಬಳಿ ಇದ್ದ ₹75 ಸಾವಿರ ಅಂದಾಜು ಮೌಲ್ಯದ ಸುಮಾರು ಒಂದೂವರೆ ಕೆ.ಜಿಗೂ ಅಧಿಕ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್ಐ ಹನುಮಂತಪ್ಪ ತಳವಾರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಪೊಲೀಸ್ ಸಿಬ್ಬಂದಿ ನಿಂಗಮ್ಮ, ಸಂಗಮೇಶ, ಪ್ರಶಾಂತ, ಶಿವರಾಜ, ಮಾಸಪ್ಪ ದಾಳಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-35-1794466290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.