ಕುಷ್ಟಗಿ: ಮಳೆಗಾಲದಲ್ಲಿ ಊರಿನ ಹಳ್ಳ, ನಾಲೆಗಳು ಹರಿಯುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲೂ ಹಳ್ಳಗಳು ಹರಿಯುವುದಕ್ಕೆ ಮಳೆಗಾಲವೇ ಇರಬೇಕೆಂದೇನೂ ಇಲ್ಲ. ಅಷ್ಟೇ ಅಲ್ಲ ಹಳ್ಳಗಳು ಮಳೆ ಬಂದಾಗ ಮಾತ್ರ ಹರಿದು ನಂತರ ನಿಲ್ಲುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಂತೂ ಯಾವುದೇ ಊರಿಗೆ ಹೋದರೂ ಹಳ್ಳಗಳು ಹಗಲಿರುಳು ಹರಿಯುತ್ತವೆ ಎಂದರೆ ಅದು ಸಮೃದ್ಧಿ ಸಂಕೇತವೆಂದು ಭಾವಿಸಿದರೆ ನಿಮ್ಮ ಊಹೆ ಖಂಡಿತಾ ತಪ್ಪು. ಅದು ನಿರಂತರ ಪೋಲಾಗುತ್ತಿರುವ 'ಸರ್ಕಾರಿ ಕೃಪಾಪೋಷಿತ' ನೀರು.

ಹೀಗೆ ನೆರೆಬೆಂಚಿ ಗ್ರಾಮದ ಹನುಮಗೌಡ ತಮ್ಮ ಮನದಲ್ಲಿ ತುಂಬಿಕೊಂಡಿದ್ದ ವ್ಯವಸ್ಥೆಯ ವಿರುದ್ಧದ ಆಕ್ರೋಶ ಹೊರಹಾಕಿದರು.

ಹೌದು, ಪಟ್ಟಣ ಅಥವಾ ಯಾವುದೇ ಗ್ರಾಮಗಳಿಗೆ ಹೋದರೂ ನೀರು ಹರಿದು ಹಳ್ಳ ಸೇರುತ್ತಿರುವುದು ಕಂಡುಬರುತ್ತದೆ. ಓವರ್ಹೆಡ್ ಟ್ಯಾಂಕ್ಗಳು, ಸಿಮೆಂಟ್ ಕೊಳಾಯಿ (ಸಿಸ್ಟರ್ನ್), ಸಾರ್ವಜನಿಕ ನಲ್ಲಿಗಳು, ಪುರಸಭೆ, ಪಂಚಾಯಿತಿಗಳ ಮುಖ್ಯಕೊಳವೆಗಳ ಮೂಲಕ ನೀರು ಪೋಲಾಗುತ್ತಿವೆ. ವ್ಯವಸ್ಥೆ ಅಷ್ಟೊಂದು ಹದಗೆಟ್ಟುಹೋಗಿದೆ. ಪಟ್ಟಣದಲ್ಲಿನ ಸ್ಥಿತಿಯೂ ಬೇರೆ ಅಲ್ಲ, ನೀರು ಹೆಚ್ಚಾದರೆ ರಸ್ತೆ, ಚರಂಡಿಗೆ ಬಿಡುತ್ತಾರೆ ಎಂಬ ಬೇಸರ ಕುಷ್ಟಗಿಯ ನಿವಾಸಿ ಸುಬಾನಿ ಅವರದು.

ಜನರಿಗೆ ನೀರು ಪೂರೈಸುವ ಜವಾಬ್ದಾರಿ ನಿಯಭಾಯಿಸುವ ಗ್ರಾಮ ಪಂಚಾಯಿತಿಗಳಂತೂ ಜಲಜಾಗೃತಿ ಮೂಡಿಸುವ ವಿಚಾರದಲ್ಲಿ ಸೋತಿವೆ. ಕೊಳವೆ ಬಾವಿಗಳ ಮೂಲಕ ನೀರು ಪೂರೈಸುತ್ತಿವೆ. ಆದರೆ ಊರಿಗೆ ಇರುವ ನೀರಿನ ಅಗತ್ಯ ಎಷ್ಟು, ಪೂರೈಕೆ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ನೀರಿಲ್ಲ ಎಂದು ಜನ ಕಚೇರಿಗೆ ಬರಬಾರದು ಅಷ್ಟೇ ಎನ್ನುವ ನಿರ್ಲಕ್ಷ್ಯ ಅಧಿಕಾರಿಗಳದ್ದು ಎನ್ನುವ ಆರೋಪ ಚಿಕ್ಕನಂದಿಹಾಳದ ಮಲ್ಲಪ್ಪ ಅವರದು.

ವಿದ್ಯುತ್ ಹೋದರೆ ಮಾತ್ರ ಪಂಪ್ ಬಂದ್: ಪಂಚಾಯಿತಿ ಕೊಳವೆಬಾವಿಗಳು ಬಂದ್ ಆಗುವುದು ವಿದ್ಯುತ್ ಇಲ್ಲದಿರುವಾಗ ಮಾತ್ರ. ಹಾಗಾಗಿ ಅಂತರ್ಜಲಕ್ಕೆ ನಿರಂತರ ಕನ್ನ ಹಾಕಲಾಗುತ್ತಿದೆ. ಕಳೆದ ವರ್ಷ ಕೊಳವೆಬಾವಿಗಳೆಲ್ಲ ಬತ್ತಿಹೋಗಿದ್ದವು. ಜನರಿಗೆ ನೀರುಣಿಸಲು ಸರ್ಕಾರ ಸಿಕ್ಕಸಿಕ್ಕಲ್ಲೆಲ್ಲ ಸಾವಿರಕ್ಕೂ ಅಧಿಕ ಅಡಿ ಕೊಳವೆಬಾವಿ ತೋಡಿದರೂ ಬರೀ ದೂಳು. ನೀರಿನಂತೆ ಹಣ ಹರಿದರೂ ಹನಿ ನೀರುಬಾರದ ಉದಾಹರಣೆಗಳು ಬಹಳಷ್ಟಿದ್ದವು.

ನೀರು ಹಾಳಾಗುತ್ತಿರುವುದು ಕಣ್ಣಿಗೇ ಕಂಡರೂ ಅದರ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಏಕೆಂದರೆ ಅದು ಸರ್ಕಾರಿ ನೀರು ಅಲ್ಲವೆ? ನೀರಿನ ಕೊರತೆಯಾದಾದರೆ ಕಚೇರಿಗೆ ಕೀಲಿ ಹಾಕುವ ಜನರಲ್ಲಿ ಪೋಲಾಗುತ್ತಿರುವುದನ್ನು ತಡೆಯಬೇಕೆನ್ನುವ ಪ್ರಜ್ಞೆ ಇಲ್ಲ ಎನ್ನುವಂತಾಗಿದೆ.

ನಲ್ಲಿಗಳೇ ಇರಲ್ಲ: ಮನೆಮನೆಗೆ ಗಂಗೆ ಪರಿಕಲ್ಪನೆಯಲ್ಲಿ ನದಿ ಮೂಲದ ನೀರನ್ನು ಸಂಸ್ಕರಿಸಿ ಜೆಜೆಎಂ ಯೋಜನೆಯಲ್ಲಿ ಪೂರೈಸುವ ಯೋಜನೆ ಇದೆ. ಆದರೆ ಬಹುತೇಕ ಹಳ್ಳಿಗಳ ಮನೆಗಳ ಬಳಿ ಪೈಪ್ ಇವೆ ನಲ್ಲಿಗಳೇ ಇಲ್ಲ. ಇದನ್ನು ಪ್ರಶ್ನಿಸಿದರೆ ಸಿಬ್ಬಂದಿಯ ಮೇಲೆಯೇ ಜನ ಹಲ್ಲೆಗೆ ಮುಂದಾಗುತ್ತಾರೆ ಎನ್ನುವ ನೆಪ ಕೆಲವು ಪಿಡಿಒಗಳದ್ದು. ಕೆಲವೆಡೆ ಪಂಚಾಯಿತಿ ಕೊಳವೆಬಾವಿಗಳ ಮೂಲಕ ನೇರವಾಗಿ ನೀರು ಪೂರೈಸುತ್ತಿದ್ದರೂ ನಿಯಂತ್ರಣವಿಲ್ಲದೆ ನೀರು ಹರಿಯುತ್ತಿರುವುದು ಸಾಮಾನ್ಯವಾಗಿದೆ.

ಯಾವುದೇ ಸಂದರ್ಭದಲ್ಲೂ ನೀರು ಪೋಲಾಗಬಾರದು. ನೆಪ ಹೇಳುವಂತಿಲ್ಲ. ಈ ವಿಷಯದಲ್ಲಿ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪಂಪಾಪತಿ ಹಿರೇಮಠ, ತಾ.ಪಂ ಇಒ

ಹಿಂದೆ ನೀರಿನಂತೆ ಹಣ ಬಳಸಬೇಡಿ ಎನ್ನಲಾಗುತ್ತಿತ್ತು. ಕಾಲ ಬದಲಾಗಿದೆ, ಹಣದಂತೆ ನೀರು ಹಾಳು ಮಾಡಬೇಡಿ ಎಂದೇ ಹೇಳುವ ಅಗತ್ಯವಿದೆ.
ಬಸವರಾಜ ಪಾಟೀಲ, ಹಿರೇಮನ್ನಾಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.