ಕುಷ್ಟಗಿ: ತಾಲ್ಲೂಕಿನ ಶಿರಗುಂಪಿ ಮೇಗೂರು ಮಧ್ಯದ ರಸ್ತೆ ಪಕ್ಕದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನಾಟಿ ಮಾಡಿದ್ದ ಗಿಡಗಳನ್ನು ಕಡಿದು ಮರಳು ಸಾಗಣೆದಾರರು ಕಚ್ಚಾ ರಸ್ತೆ ಮಾಡಿಕೊಂಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಸನಗೌಡ ದಿಡ್ಡಿಮನಿ ಹೇಳಿದ್ದಾರೆ.

ಈ ವಿಷಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಪ್ರಾದೇಶಿಕ ವಲಯ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿತ್ತು ಆದರೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಲ್ಲಿ ಯಾವುದೇ ಸಸಿಗಳನ್ನೇ ನಾಟಿ ಮಾಡಿಲ್ಲ, ಹೊಲಕ್ಕೆ ಹೋಗುವ ದಾರಿಯಲ್ಲಿ ಕಚ್ಚಾ ರಸ್ತೆ ನಿರ್ಮಿಸಿಕೊಳ್ಳಲಾಗಿದೆ ಎಂದು ಸುಳ್ಳು ವರದಿ ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ನರೇಗಾ ಯೋಜನೆ ಈ ರಸ್ತೆಯಲ್ಲಿ 2023-24ರಲ್ಲಿ ಒಟ್ಟು 900 ಸಸಿಗಳನ್ನು ನಾಟಿ ಮಾಡಿರುವುದಾಗಿ ಸಾಮಾಜಿಕ ಅರಣ್ಯ ಇಲಾಖೆ ತಮಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡಿದೆ. ಆದರೆ ಈಗ ಕಚ್ಚಾ ರಸ್ತೆ ನಿರ್ಮಿಸಿದ ಜಾಗದಲ್ಲಿ ಸಸಿಗಳನ್ನೇ ನಾಟಿ ಮಾಡಿಲ್ಲ ಎಂದು ಪಂಚನಾಮೆ ವರದಿ ನೀಡಿದೆ ಇದರಲ್ಲಿ ಯಾವುದು ಸರಿ ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದರು.

ದೂರು ನೀಡಿದ ನಂತರ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಆದೇಶದಂತೆ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಪರಿಶೀಲನೆ ನಡೆಸಿದ್ದಾರೆ. ಪಂಚನಾಮೆ ಸಂದರ್ಭ ಹಾಜರಿದ್ದ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ ಜಮೀನಿನವರು. ಇನ್ನೊಬ್ಬರು ದೂರದಲ್ಲಿರುವ ದೋಟಿಹಾಳ ಗ್ರಾಮಕ್ಕೆ ಸೇರಿದವರು. ಮತ್ತೊಬ್ಬರು ಮೇಗೂರಿನವರಾಗಿದ್ದು ಸ್ಥಳ ಪಂಚನಾಮೆಗೆ ಸಹಿ ಮಾಡಿದ್ದಾರೆ. ಆದರೆ ಈ ವರದಿಯೇ ಸುಳ್ಳು ಮಾಹಿತಿಯಿಂದ ಕೂಡಿದೆ ಎಂದು ಹೇಳಿದರು. ಮರಳು ಗಣಿಗಾರಿಕೆ ಸ್ಥಳಕ್ಕೆ ವ್ಯಕ್ತಿಯೊಬ್ಬರು ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಂಡಿದ್ದಾರೆ, ಈ ವೇಳೆ ಅಲ್ಲಿದ್ದ ಗಿಡಗಳನ್ನು ಕಡಿದುಹಾಕಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ತಪ್ಪನ್ನು ಮುಚ್ಚಿಹಾಕುವಲ್ಲಿ ನಿರತರಾಗಿದ್ದಾರೆ. ಈ ಕುರಿತು ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಅರಣ್ಯ ಇಲಾಖೆ ಆರ್ಎಫ್ಒ ಹನುಮಂತಪ್ಪ, ಹಿಂದೆ ಬೇರೆ ಅಧಿಕಾರಿ ಇಲ್ಲಿ ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಸಸಿ ನಾಟಿ ಮಾಡಲಾಗಿದೆ, ಆದರೆ ಮಾಹಿತಿ ಪ್ರಕಾರ ಕಚ್ಚಾ ರಸ್ತೆ ಜಾಗದಲ್ಲಿ ಮೊದಲು ಹೊಲದ ದಾರಿ ಇತ್ತು ಎಂದು ಗೊತ್ತಾಗಿದೆ. ಕಚ್ಚಾ ರಸ್ತೆ ನಿರ್ಮಿಸುವುದಕ್ಕೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಉಪ ವಿಭಾಗ ನಿರಾಕ್ಷೇಪಣಾ ಪತ್ರ ನೀಡಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-35-1394199008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.