ಕುಷ್ಟಗಿ: ಸಮರ್ಪಕ ದಾಖಲೆಗಳಿದ್ದರೂ ಮದುವೆ ನೋಂದಣಿಗೆ ಇಲ್ಲಿಯ ಉಪನೋಂದಣಾಧಿಕಾರಿ ಅವರು, ಅವಕಾಶ ನಿರಾಕರಿಸುವ ಮೂಲಕ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ವಿಷಯ ಕುರಿತು ಬುಧವಾರ ಇಲ್ಲಿ ಉಪನೋಂದಣಿ ಕಚೇರಿ ಬಳಿ ದಾಖಲೆಗಳನ್ನು ಪ್ರದರ್ಶಿಸಿ ಅಸಮಾಧಾನ ಹೊರಹಾಕಿದ ನೂತನ ದಂಪತಿ ಸಂಬಂಧಿಕರಾದ ಶಂಕರ ಚೌಡ್ಕಿ, ಅಮರೇಶ ಚೌಡ್ಕಿ ಅವರು, ‘ಮದುವೆ ನೋಂದಣಿಗೆ ಅಗತ್ಯವಿರುವ ಎಲ್ಲ ದಾಖಲೆಗಳಿವೆ. ವಯಸ್ಸಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದವರೂ ದೃಢೀಕರಿಸಿದ್ದಾರೆ. ಆದರೂ ನೋಂದಣಾಧಿಕಾರಿ ವಯಸ್ಸಿನ ದೃಢೀಕರಣ ಇಲ್ಲ ಎಂದು ನೋಂದಣಿಗೆ ಅವಕಾಶ ನೀಡುತ್ತಿಲ್ಲ. ಇದರ ಹಿಂದೆ ದುರುದ್ದೇಶವಿದೆ’ ಎಂದು ಆರೋಪಿಸಿದರು.

ಆಗಿದ್ದೇನು: ತಾಲ್ಲೂಕಿನ ಲಿಂಗದಳ್ಳಿ ಗ್ರಾಮದ ಮುತ್ತಮ್ಮ ಗರ್ಜನಾಳ ಮತ್ತು ನೀರಲೂಟಿ ಗ್ರಾಮದ ಶರಣಪ್ಪ ತುಪ್ಪದ ಅವರ ಮದುವೆ ಫೆಬ್ರವರಿ 16ರಂದು ನೀರಲೂಟಿ ಗ್ರಾಮದ ಸಾಮೂಹಿಕ ವಿವಾಹದಲ್ಲಿ ನೆರವೇರಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕರು ವೈದ್ಯಕೀಯ ಪರೀಕ್ಷೆ ನಡೆಸಿ, ವಧು ಮುತ್ತಮ್ಮ ಅವರಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಆಗಿರುವ ಬಗ್ಗೆ ಪ್ರಮಾಣಪತ್ರ ನೀಡಿದ್ದು, ಅದನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವೂ ಅನುಮೋದಿಸಿದೆ. ಮುತ್ತಮ್ಮ ಶಾಲೆಗೆ ದಾಖಲಾಗಿಲ್ಲ ಎಂದು ಲಿಂಗದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರೂ ವರದಿ ನೀಡಿದ್ದಾರೆ. ಈ ಎಲ್ಲ ದಾಖಲೆಗಳಿದ್ದರೂ ಉಪನೋಂದಣಾಧಿಕಾರಿ ಮದುವೆಯನ್ನು ನೋಂದಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಸಂಬಂಧಿಕರು ದೂರಿದರು.

ದೂರಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪನೋಂದಣಾಧಿಕಾರಿ ರೇವಮ್ಮ ಶಿವಣಗಿ, ‘ಆಧಾರ ಕಾರ್ಡ್ನಲ್ಲಿ ಕಡಿಮೆ ವಯಸ್ಸಿದೆ. ಜನನ ಪ್ರಮಾಣಪತ್ರ ಇಲ್ಲ. ಹೀಗಾಗಿ ಅಗತ್ಯ ದಾಖಲೆ ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ. ಅದರಲ್ಲಿ ಅನಗತ್ಯ ವಿಳಂಬದ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ನಂತರ ನಡೆದ ಚರ್ಚೆಯ ವೇಳೆ ತಹಶೀಲ್ದಾರ್ ಗುರುರಾಜ ಛಲವಾದಿ ಅವರು ದಾಖಲೆಗಳನ್ನು ಪರಿಶೀಲಿಸಿ ಸೂಕ್ತವಾಗಿದ್ದರೆ ನೋಂದಣಿ ಮಾಡುವಂತೆ ಉಪ ನೋಂದಣಾಧಿಕಾರಿಗೆ ಸೂಚಿಸಿದರು. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರೇವಮ್ಮ ಹೇಳಿದರು.

ಅಧಿಕ ಹಣ ವಸೂಲಿ ಆರೋಪ: ಉಪ ನೋಂದಣಾಧಿಕಾರಿ ನೀಡಿದ ಮಾಹಿತಿ ಪ್ರಕಾರ ಮದುವೆ ನೋಂದಣಿಗೆ ರಶೀದಿ ಸಹಿತ ಶುಲ್ಕ ಕೇವಲ ₹ 178 ಮಾತ್ರ ಇದೆ. ಆದರೆ ನೋಂದಣಿ ಪ್ರಕ್ರಿಯೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲಾಗಿದೆ. ಆದರೆ ಮಧ್ಯವರ್ತಿ ₹ 2,500 ಹಣವನ್ನು ಪೋನ್ಪೇ ಮೂಲಕ ಪಡೆದುಕೊಂಡಿದ್ದಾನೆ. ಆದರೂ ನೋಂದಣಿಗೆ ಅವಕಾಶ ಕಲ್ಪಿಸಿಲ್ಲ ಎಂದು ಶಂಕರ ಚೌಡ್ಕಿ, ಅಮರೇಶ ಚೌಡ್ಕಿ ವಿವರಿಸಿದರು. ‘ಹಣ ಕೊಟ್ಟರೆ ಮಾತ್ರ ಫೈಲ್ಗಳು ಸಲೀಸಾಗಿ ವಿಲೇವಾರಿಯಾಗುತ್ತವೆ. ಅದೇ ವಿಂಡ್ಪವರ್ ಕಂಪನಿಗಳ ಫೈಲ್ಗಳ ವಿಲೇವಾರಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.

‘ಹಣ ತೆಗೆದುಕೊಳ್ಳುವಂತೆ ತಾವು ಮಧ್ಯವರ್ತಿಗೆ ಸೂಚಿಸಿಲ್ಲ’ ಎಂದು ನೋಂದಣಾಧಿಕಾರಿ ರೇವಮ್ಮ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-1302937495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.