ಕುಷ್ಟಗಿ: ಪುರಸಭೆ ಮತ್ತು ಸದಸ್ಯರಾದವರು ಮನಸ್ಸು ಮಾಡಿದ್ದರೆ ಈವೇಳೆಗೆ ಪಟ್ಟಣವು ಹಸಿರಿನಿಂದ ಕಂಗೊಳಿಸುವ ಮೂಲಕ ಕುಷ್ಟಗಿಗೆ ‘ಉದ್ಯಾನ ನಗರ’ ಎಂಬ ವಿಶೇಷಣ ಸೇರ್ಪಡೆಗೊಳ್ಳುತ್ತಿತ್ತು. ಆದರೆ ಸಂಬಂಧಿಸಿದವರು ಆಸಕ್ತಿ ತೋರಿಲ್ಲ.

‘ಮಕ್ಕಳು, ಮಹಿಳೆಯರು, ವೃದ್ಧರು, ಹಿರಿಯ ನಾಗರಿಕರು.. ಹೀಗೆ ಮನ ಹಗುರಾಗಿಸಿಕೊಳ್ಳಲು ಸುಂದರ ವಿಹಾರ ತಾಣಗಳು ಕಣ್ಣಿಗೆ ಮುದ ನೀಡಬೇಕಿತ್ತು. ಆದರೆ ಅದೆಲ್ಲ ಬರೀ ಕಲ್ಪನೆಯಾಗಿಯೇ ಉಳಿದಿದೆ. ಉದ್ಯಾನ ಜಾಗಗಳೆಲ್ಲ ಹಾಳು ಬಿದ್ದಿವೆ. ಅಭಿವೃದ್ಧಿಪಡಿಸುವ ಆಸಕ್ತಿ ಅಧಿಕಾರಿಗಳಲ್ಲಿಲ್ಲ.

ಪಟ್ಟಣದಲ್ಲಿ ಉದ್ಯಾನಗಳು ಮತ್ತು ಅಭಿವೃದ್ಧಿ ವಿಷಯ ತೆಗೆದರೆ ಸಾಕು ನಾಗರಿಕರಲ್ಲಿ ಅಸಮಾಧಾನ ಮಡುಗಟ್ಟಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಹುರಿಗೊಳ್ಳುತ್ತದೆ. ವಸತಿ ಬಡಾವಣೆಗಳಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಬಳಕೆಗೆ ಮತ್ತು ಉದ್ಯಾನ ನಿರ್ಮಾಣಕ್ಕೆ ಕಡ್ಡಾಯವಾಗಿ ಜಾಗ ತೆಗೆದಿರಿಸುವುದರ ಸರ್ಕಾರದ ಉದ್ದೇಶವಾದರೂ ಏನು ಮತ್ತು ಅದು ವಾಸ್ತವದಲ್ಲಿ ಅನುಷ್ಠಾನಗೊಳ್ಳುತ್ತಿದೆಯೇ ಎಂಬ ಜನರ ಪ್ರಶ್ನೆಗೆ ಉತ್ತರವಿಲ್ಲ. ದಶಕಗಳಿಂದಲೂ ಉದ್ಯಾನ ಉಳಿಸಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಕೆಲವರು ಮುಂದಡಿ ಇಟ್ಟರೂ ಕಾಲು ಹಿಂದಕ್ಕೆ ಎಳೆಯುತ್ತ ಬಂದವರೇ ಹೆಚ್ಚು ಎನ್ನುವ ಅತೃಪ್ತಿ ಜನರಲ್ಲಿದೆ.

ಸಾರ್ವಜನಿಕ ಉದ್ಯಾನದ ಮಾತೆತ್ತಿದರೆ ಥಟ್ಟನೇ ನೆನಪಾಗುವುದು 4 ಕಿ.ಮೀ ದೂರದ ನಿಡಶೇಸಿ ಕೆರೆ ತಟದಲ್ಲಿರುವ ಉದ್ಯಾನ. ಆದರೆ ಪಟ್ಟಣದಲ್ಲಿಯೇ ಪುರಸಭೆಯ ವ್ಯಾಪ್ತಿಯಲ್ಲಿ 200 ಉದ್ಯಾನ ಜಾಗಗಳಿದ್ದರೂ ಅವುಗಳ ಬಗ್ಗೆ ಯಾರೂ ದನಿ ಎತ್ತುತ್ತಿಲ್ಲ.

ಪುರಸಭೆ ಅಧಿಕಾರಿಗಳು ಕೆಲ ವರ್ಷ ಇದ್ದು ಹೋಗುವವರು. ಆದರೆ ಇಲ್ಲಿಯೇ ಜೀವನ ಸವೆಸುವ ಪುರಸಭೆ ಇತರೆ ಪ್ರತಿನಿಧಿಗಳಿಗಾದರೂ ಕಳಕಳಿ ಇರಬೇಕಿತ್ತು. ಆದರೆ ಅಧಿಕಾರ ಬಳಕೆಯಾದದ್ದು ಸ್ವಾರ್ಥಪರ ಚಿಂತನೆಗೆ ಮಾತ್ರ ಎನ್ನುವ ಆರೋಪ ನಾಗರಿಕರದ್ದಾಗಿದೆ. ಹೀಗಾಗಿ ಉದ್ಯಾನ ಜಾಗಗಳು ಗಬ್ಬೆದ್ದು ಕೊಳಚೆ ಗುಂಡಿ, ಕಸ ಸಂಗ್ರಹ, ವಾಹನ ನಿಲುಗಡೆಗೆ, ಕಟ್ಟಿಗೆ ಒಟ್ಟಿಕೊಳ್ಳುವುದಕ್ಕೆ ಮೀಸಲಾಗಿವೆ. ಉಳಿದೆಡೆ ಮುಳ್ಳುಕಂಟಿಗಳು ಬೆಳೆದಿರುವುದು ಕಂಡುಬರುತ್ತದೆ.

ಕಡತದಲ್ಲಿ 183 ಉದ್ಯಾನಗಳು..

ಪುರಸಭೆ ಕಡತದ ಪ್ರಕಾರ ಪಟ್ಟಣದಲ್ಲಿ ರಚನೆಗೊಂಡಿರುವ ಬಡವಾಣೆಗಳಲ್ಲಿ 183(ಹೊಸ ಉದ್ಯಾನ ಸೇರಿಲ್ಲ) ಉದ್ಯಾನಕ್ಕೆ ಮೀಸಲು ಜಾಗಗಳಿವೆ. 125 ಸಾರ್ವಜನಿಕ ಬಳಕೆ(ಸಿಎ) ನಿವೇಶನಗಳಿವೆ. ಇವು ಲೆಕ್ಕಕ್ಕೆ ಮಾತ್ರ ಇದ್ದು, ಒತ್ತುವರಿ, ದುರುಪಯೋಗವಾಗಿವೆ. ಉದ್ಯಾನ ಜಾಗ ರಕ್ಷಿಸಿ ಅಭಿವೃದ್ಧಿಪಡಿಸಬೇಕಿದ್ದ ಪುರಸಭೆ ನಿರ್ಲಕ್ಷ್ಯ ವಹಿಸಿದೆ. ಬೆರಳೆಣಿಕೆ ಜಾಗಗಳಿಗೆ (11ಕ್ಕೆ) ಮಾತ್ರ ತಂತಿಬೇಲಿ, ಗೋಡೆ ನಿರ್ಮಿಸಲಾಗಿದೆ. ಉಳಿದವುಗಳನ್ನು ಪತ್ತೆ ಮಾಡಿ ಫಲಕವನ್ನೂ ಅಳವಡಿಸಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು.

ಅಭಿವೃದ್ಧಿ ಹೆಸರಲ್ಲಿ ಕೆಲ ಉದ್ಯಾನಗಳಿಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದರೂ ಈಗ ಅಧ್ವಾನಗೊಂಡಿವೆ. ನಿರ್ವಹಣೆಯಿಲ್ಲದೆ ಹಾಳಾಗಿವೆ. ಬದುಕಿನ ಸಂಧ್ಯಾಕಾಲದಲ್ಲಿ ಮಕ್ಕಳು, ಹಿರಿಯರೊಂದಿಗೆ ಒಂದಷ್ಟು ಕುಳಿತು ಕಾಲಕಳೆಯಬೇಕೆನ್ನುವುದಕ್ಕೆ ಜಾಗವಿಲ್ಲ ಎನ್ನುತ್ತಾರೆ ಹಿರಿಯರು. ಉದ್ಯಾನಗಳ ಉಳಿವು ಮತ್ತು ಅಭಿವೃದ್ಧಿಗಾಗಿ ಸಾರ್ವಜನಿಕರು, ಸಂಘಟನೆಗಳು ಈಗಲಾದರೂ ಜನಪರ ಚಳವಳಿಗೆ ಮುಂದಾಗಬೇಕು ಎಂಬ ಅಭಿಪ್ರಾಯ ಕೇಳಿದೆ.

ಸಾರ್ವಜನಿಕರ ಅನುಕೂಲಕ್ಕೆಂದೇ ಉದ್ಯಾನ ಜಾಗ ಮೀಸಲಿಡುವ ಸರ್ಕಾರದ ಉದ್ದೇಶ ನಿರರ್ಥಕವಾಗಿದೆ. ಮನವಿ ಮಾಡಿದರೂ ಕ್ಯಾರೇ ಎನ್ನದ ಅಧಿಕಾರಿಗಳ ಚರ್ಮ ದಪ್ಪವಾಗಿದೆ
–ಡಿ.ಬಿ.ಗಡೇದ, ನಿವೃತ್ತ ಪ್ರಾಚಾರ್ಯ

ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಉದ್ಯಾನ ಜಾಗಗಳ ಸಂರಕ್ಷಣೆಗೆ ಈಗಿನಿಂದಲೇ ಜನಪರ ಹೋರಾಟ ರೂಪಿಸುವ ಚಿಂತನೆ ನಡೆಯುತ್ತಿದೆ
–ಪರಸಪ್ಪ ಅಮರಾವತಿ, ಉಪಾಧ್ಯಕ್ಷ, ನಾಗರಿಕ ಹೋರಾಟ ಸಮಿತಿ

ಉದ್ಯಾನ ಜಾಗ ದುರ್ಬಳಕೆ, ಅಭಿವೃದ್ಧಿ ಕಡೆಗಣಿಸಿರುವ ಪುರಸಭೆ ವಿರುದ್ಧ ಜನ ಧ್ವನಿ ಎತ್ತಿದರೂ ಜಿಲ್ಲಾಡಳಿತ ಗಂಭೀರತೆ ಕಳೆದುಕೊಂಡಿದೆ. ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ
–ವಜೀರ್ಅಲಿ ಗೋನಾಳ, ಅಧ್ಯಕ್ಷ, ಭಗತ್ಸಿಂಗ್ ಕ್ರೀಡಾ ಸಂಸ್ಥೆ

ಹಂತ ಹಂತವಾಗಿ ಉದ್ಯಾನ, ಸಿಎ ಸೈಟ್ಗಳಿಗೆ ಬೇಲಿ ಅಳವಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಅನುದಾನ ಲಭ್ಯತೆ ನೋಡಿ ಅಭಿವೃದ್ಧಿಗೆ ಮುಂದಾಗುತ್ತೇವೆ
–ವೆಂಕಪ್ಪ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-418599798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.