ಕುಷ್ಟಗಿ: ‘ಸರ್ವಧರ್ಮಗಳ ಸಮನ್ವಯಕ್ಕೆ ಮಾದರಿ ಆಗಿರುವ ಪಟ್ಟಣ ಸೇರಿದಂತೆ ತಾಲ್ಲೂಕು ಶಾಂತಿ, ಸೌಹಾರ್ದತೆ ಸಂಸ್ಕೃತಿಯ ನೆಲೆಯಾಗಿದೆ. ಜಾತಿಯ ಸೋಂಕಿಲ್ಲದ ಇಂತಹ ಪರಂಪರೆ ಭವಿಷ್ಯದ ಪೀಳಿಗೆಯವರೆಗೂ ಮುಂದುವರಿಯಬೇಕಿದೆ’ ಎಂದು ಮಾಜಿ ಶಾಸಕ ಕೆ.ಶರಣಪ್ಪ ಹೇಳಿದರು.

ರಂಜಾನ್ ಮಾಸಾಚರಣೆ, ಈದ್ ಉಲ್ ಫಿತ್ರ್ ಶಾಂತಿಯುತವಾಗಿ ಸಮಾರೋಪಗೊಂಡ ಕಾರಣಕ್ಕೆ ಪರಸ್ಪರ ಸಂತಸವನ್ನು ವಿನಿಯಮ ಮಾಡಿಕೊಳ್ಳುವ ಉದ್ದೇಶದಿಂದ ಪಟ್ಟಣದ ಮದೀನಾ ಮಸೀದಿ ಸಮಿತಿ ಹಾಗೂ ಮದೀನಾ ಓಣಿಯ ಮುಸ್ಲಿಂ ಸಮಾಜದ ವತಿಯಿಂದ ಏರ್ಪಡಿಸಿದ್ದ ‘ಈದ್ ಮಿಲನ್ ಸಹಾರ್ದ ಕೂಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಗವದ್ಗೀತೆ, ಕುರ್ಆನ್, ಬೈಬಲ್, ವಚನ ಸಾಹಿತ್ಯದಂಥ ಧಾರ್ಮಿಕ ಸಮಾನತೆಯ ತಳಹದಿಯ ಮೇಲೆ ಸಮಾಜ ಮುನ್ನಡೆಯುತ್ತಿದೆ. ಡಾ.ಅಂಬೇಡ್ಕರ್ ಅವರಿಂದ ರೂಪುಗೊಂಡ ಸಂವಿಧಾನ ಗ್ರಂಥವೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಹದಿಯಾಗಿದೆ. ಈ ಎರಡನ್ನೂ ಸಮನ್ವಯದಿಂದ ಸಮಾಜ ನಿರ್ಮಾಣಗೊಳ್ಳಬೇಕು. ಸೌಹಾರ್ದ, ಸಮಾನತೆ ಭಾವ ನಮ್ಮಲ್ಲಿ ಸಮ್ಮಿಳಿತಗೊಳ್ಳಬೇಕು’ ಎಂದು ಆಶಿಸಿದರು.

ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿ, ‘ವಿಭಿನ್ನ ಸಂಸ್ಕೃತಿ, ಪರಂಪರೆಯಲ್ಲಿ ಎಲ್ಲ ಸಮುದಾಯಗಳ ಒಳಗೊಳ್ಳುವಿಕೆ ಇಲ್ಲಿದೆ. ಕಾನೂನನ್ನು ಗೌರವಿಸುವ ಜನರೂ ಇಲ್ಲಿದ್ದಾರೆ. ಪ್ರತಿಯೊಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಂಸ್ಕಾರ ಇಲ್ಲಿಯ ಜನರಲ್ಲಿದೆ. ಹಾಗಾಗಿ ‘ಕುಷ್ಟಗಿಗೆ ಭಾವೈಕ್ಯೆತೆಯ ನಗರ’ ಎಂಬ ಅರ್ಥದೊಂದಿಗೆ ನಾಮಕರಣಗೊಳ್ಳಬೇಕಿದೆ. ಅಲ್ಲದೆ ಜನ ಮನಗಳ ಮಧ್ಯೆ ಕಂದಕ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಎಲ್ಲರ ಮೇಲಿದೆ’ ಎಂದು ಹೇಳಿದರು.

ಶಿಕ್ಷಕ ಶಾಮೀದ್ ಮದ್ಗಾರ್ ವಿಶೇಷ ಉಪನ್ಯಾಸ ನೀಡಿದರು. ಮೌಲಾನಾ ಹಾಫೀಜ್ ರಿಜ್ವಾನ್, ಅಧ್ಯಕ್ಷತೆ ವಹಿಸಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರು ಮಾತಾಡಿದರು.

ಸಂಗಪ್ಪ ಪಂಚಮ, ಬಸವರಾಜ ಭೋವಿ, ಅಹ್ಮದ್ ಹುಸೇನ್ ಆದೋನಿ, ರಾಜೇಶ ಪತ್ತಾರ, ಫೈರೋಜ್ ಆನೆಹೊಸೂರು, ಡಾ.ಶೇಖ್ ಜವ್ಬಾದ್ ಹುಸೇನ್, ದೇವಪ್ಪ ಕಟ್ಟಿಹೊಲ, ನಟರಾಜ ಸೋನಾರ, ಬಸವರಾಜ ಹೊರಪ್ಯಾಟಿ ಸೇರಿದಂತೆ ಇತರೆ ಪ್ರಮುಖರು, ಮದೀನಾ ಮಸೀದಿ ಸಮಿತಿ ಮುಖಂಡರು, ಯುವಕರು ಸೌಹಾರ್ದ ಕೂಟದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕ, ಜನಪದ ಕಲಾವಿದ ಜೀವನಸಾಬ್ ವಾಲೀಕಾರ ಅವರನ್ನು ಸನ್ಮಾನಿಸಲಾಯಿತು. ಮುಸ್ಲಿಂ ಪಂಚ್ ಸಮಿತಿ ಉಪಾಧ್ಯಕ್ಷ ಖಾಜಾ ಮೈನುದ್ದೀನ್ ಮುಲ್ಲಾ ಸ್ವಾಗತಿಸಿದರು. ಅಲ್ತಾಫ್ ಹುಸೇನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-35-955488567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.