ಕುಷ್ಟಗಿ: ಕುಷ್ಠಗಿಯಲ್ಲಿ ರೈಲು ಸಂಚಾರ ಆರಂಭವಾಗಬೇಕು ಎಂಬ ಶತಮಾನದ ಕನಸು ನನಸಾಗಿ ಶುಕ್ರವಾರಕ್ಕೆ ಒಂದು ವರ್ಷವಾಗಿದ್ದು, ರೈಲ್ವೆ ಹೋರಾಟ ಸಮಿತಿ ಸದಸ್ಯರು ಹಾಗೂ ನಾಗರಿಕರು ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಂಡರು.

ಹುಬ್ಬಳ್ಳಿವರೆಗೂ ರೈಲಿನಲ್ಲಿ ಪ್ರಯಾಣಿಸಿ ಪರಸ್ಪರ ಸಿಹಿ ವಿನಿಮಯ ಮಾಡುವ ಜೊತೆಗೆ ಪ್ರಯಾಣಿಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಈ ವೇಳೆ ಮಾಧ್ಯಮ ಮುಂದೆ ಸಂಭ್ರಮ ಹಂಚಿಕೊಂಡ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್ ಅವರು ‘ರೈಲ್ವೆ ಸಂಚಾರ ಆರಂಭವಾಗಬೇಕು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಹಾಗೇ ವರ್ಷ ಕಳೆದರೂ ಕೇವಲ ಹುಬ್ಬಳ್ಳಿ ನಗರಕ್ಕೆ ಒಂದೇ ರೈಲು ಸಂಚರಿಸುತ್ತಿದೆ. ಇನ್ನೂ ಹೆಚ್ಚಿನ ನಗರಗಳಿಗೆ ರೈಲು ಸಂಚಾರ ಆರಂಭವಾದರೆ ಈ ಭಾಗಕ್ಕೆ ಅನುಕೂಲವಾಗುತ್ತದೆ. ಅದರಲ್ಲೂ ರಾಜಧಾನಿ ಬೆಂಗಳೂರು ನಗರಕ್ಕೆ ರೈಲು ಸಂಚಾರ ಅಗತ್ಯವಿದೆ’ ಎಂದರು.

ಮಹಾಂತಯ್ಯ ಅರಳಲಿಮಠ, ಅಭಿನಂದನ್ ಗೋಗಿ, ಭಾರತೀಯ ರೆಡ್ ಕ್ರಾಸ್ ಸಮಿತಿ ಜಿಲ್ಲಾ ನಿರ್ದೇಶಕ ರವಿಕುಮಾರ ದಾನಿ, ಬಾಬು ಘೋರ್ಪಡೆ, ಮಂಜು ಕಟ್ಟಿಮನಿ, ಬಿ.ಎಂ. ಜೋಶಿ, ರಮೇಶ ಕೊನಸಾಗರ, ವೀರೇಶ ಕರಡಿ, ಇನ್ನರವೀನ್ ಕ್ಲಬ್ನ ಪಾರ್ವತಿ, ಶಾರದಾ ಶೆಟ್ಟರ, ವಂದನಾ ಗೋಗಿ, ಎ.ವೈ.ಲೋಕರೆ, ಅಸ್ಲಾರಾಮ್, ಜೆ.ಜೆ.ಆಚಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-1436362439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.