ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ಸಮುದಾಯಗಳ ಮಧ್ಯೆ ಭಾತೃತ್ವ ನೆಲೆಸಿದೆ. ಜಾತಿ ಭೇದ ಮರೆತು ಸೌಹಾರ್ದಯುತ, ಶಾಂತಿಯುತ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಯ ಜನ ಇತರರಿಗೆ ಮಾದರಿಯಾಗಿದ್ದಾರೆ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.

ರಂಜಾನ್ ಮಾಸದ ಅಂತ್ಯದ ನಂತರ ಈದ್ ಉಲ್ ಫಿತ್ರ್ ಆಚರಣೆ ವೇಳೆ ಇಲ್ಲಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮಲ್ಲಿ ಜಾತಿ, ರಾಜಕೀಯ ಸೋಂಕು ಇಲ್ಲ. ಇಲ್ಲಿ ಚುನಾಯಿತರಾಗಿರುವ ಹಾಲಿ, ಮಾಜಿ ಶಾಸಕರು ಒಂದೇ ವೇದಿಕೆಯನ್ನು ಹಂಚಿಕೊಂಡು ಅಭಿವೃದ್ಧಿ ವಿಷಯಗಳನ್ನು ಕುರಿತು ಚರ್ಚಿಸುತ್ತಿರುತ್ತೇವೆ. ರಂಜಾನ್ ಸಂದರ್ಭದಲ್ಲಿ ಉಪವಾಸ ವ್ರತ ಆಚರಿಸುವ ಮುಸ್ಲಿಮರಿಗೆ ಇಲ್ಲಿಯ ಹಾಲಿ ಮಾಜಿ ಶಾಸಕರು ಪ್ರತಿವರ್ಷವೂ ಇಫ್ತಾರ್ ಕೂಟ ನಡೆಸುವ ಮೂಲಕ ಮಾನವೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ. ರಾಜಕಾರಣಿಗಳಲ್ಲಿನ ಇಂಥಯ ಮಾದರಿ ನಡೆ ಬಹುಶಃ ಬೇರೆ ಕಡೆ ಕಾಣಲಿಕ್ಕಿಲ್ಲ’ ಎಂದರು.

ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬದುಕಿದರೆ ಎಲ್ಲವನ್ನೂ ಗೆಲ್ಲಲು ಸಾಧ್ಯ, ಯಾವುದೇ ಸಮುದಾಯಗಳ ಕಾರ್ಯಕ್ರಮಗಳು ಬಾಂಧವ್ಯ ಬೆಸೆಯುವಂತಿರಬೇಕು. ಅಂಥ ಮಾದರಿಯನ್ನು ನಮ್ಮ ತಾಲ್ಲೂಕಿನ ಜನರು ಅನುಸರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಆರ್ಥಿಕ ನೆರವು ನೀಡುವುದಾಗಿ ಹೇಳಿದರು.

ಮಾಜಿ ಶಾಸಕ ಕೆ.ಶರಣಪ್ಪ, ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಬಯ್ಯಾಪುರ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಹಾಫೀಜ್ ಫಜೇಲ್ ಅಜೀಂ, ಏಜಾಜುದ್ದೀನ್ ಖಾಜಿ, ಸಯ್ಯದ್ ಹುಸೇನ್ ಮುಲ್ಲಾ, ಸಯ್ಯದ್ ಅಯೂಬ್ ಮುಲ್ಲಾ. ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್ಐ ಹನುಮಂತಪ್ಪ ತಳವಾರ, ಅಹ್ಮದ್ ಹುಸೇನ್, ಡಾ.ಶೇಖಬಾಬು, ಸಯ್ಯದ್ ಅತ್ತಾರ್, ಖಾಜಾ ಮೈನುದ್ದೀನ್ ಮುಲ್ಲಾ, ಉಮೇಶ ಮಂಗಳೂರು ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದಕ್ಕೂ ಮೊದಲು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳೂ ಸೇರಿದಂತೆ ಬಹಳಷ್ಟು ಜನರು ಭಾಗವಹಿಸಿದ್ದರು.

ಅದೇ ರೀತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿಯೂ ಈದ್ ಉಲ್ ಫಿತ್ರ್ ಆಚರಣೆ ಶ್ರದ್ಧೆ, ಸಂಭ್ರಮದೊಂದಿಗೆ ನೆರವೇರಿತು. ವಿವಿಧ ಈದ್ಗಾ ಮೈದಾನಗಳಿಗೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಧನ, ಧಾನ್ಯಗಳ ದಾನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-35-312386536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.