ನಾರಾಯಣರಾವ ಕುಲಕರ್ಣಿ

ಕುಷ್ಟಗಿ: ಒಂದೆಡೆ ಪೆಟ್ರೋಲ್ ಬಂಕ್ ಬಳಿ ಡೀಸೆಲ್ಗೆ ಮುಗಿಬಿದ್ದ ಟ್ರ್ಯಾಕ್ಟರ್ ಮಾಲೀಕರು. ಇನ್ನೊಂದೆಡೆ ಡಿಎಪಿ ಕೊಡಿ ಎಂದು ಗೊಬ್ಬರ ಅಂಗಡಿಯವರ ಬಳಿ ರೈತರ ಗೋಗರೆತ. ಮಂಗಳವಾರ ಪಟ್ಟಣದ ವಿವಿಧೆಡೆ ಕಂಡುಬಂದ ಗೌಜು ಗದ್ದಲದ ದೃಶ್ಯಗಳಿವು.

ಇಷ್ಟಕ್ಕೆಲ್ಲ ಕಾರಣ ಡೀಸೆಲ್ ಅಭಾವ. ವಿಳಂಬವಾದರೂ ಕೆಲ ದಿನಗಳ ಹಿಂದೆ ತಾಲ್ಲೂಕಿನಾದ್ಯಂತ ಏಕಪ್ರಕಾರವಾಗಿ ಮಳೆ ಬಂದಿರುವುದರಿಂದ ಬಿತ್ತುವುದಕ್ಕೆ ಹೊಲಗದ್ದೆಗಳನ್ನು ಹದಗೊಳಿಸುವ ನಿಟ್ಟಿನಲ್ಲಿ ರೈತರು ಉತ್ಸುಕರಾಗಿದ್ದಾರೆ. ಬಹುತೇಕ ರೈತರು ಬಿತ್ತನೆಗೂ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಡಿಸೇಲ್ ಮತ್ತು ಡಿಎಪಿ ವಿಷಯಗಳು ರೈತರಿಗೆ ಭೂತದರ್ಶನವಾದಂತಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬಂದವು.

ಕಳೆದ ಒಂದೆರಡು ವಾರಗಳಿಂದಲೂ ಡೀಸೆಲ್ ಕೊರತೆ ಉಂಟಾಗಿರುವುದರಿಂದ ಬಹುತೇಕ ಟ್ರ್ಯಾಕ್ಟರ್ಗಳು ಖಾಲಿ ನಿಲ್ಲುವಂತಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು ಹತ್ತು ಪೆಟ್ರೋಲ್ ಬಂಕ್ಗಳಿದ್ದು ಮಂಗಳವಾರ ಎಲ್ಲ ಕಡೆ ಪೆಟ್ರೋಲ್ ಡೀಸೆಲ್ ‘ನೋ ಸ್ಟಾಕ್’ ಫಲಕಗಳು ಕಂಡುಬಂದವು. ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ತಿಕೋಟಿಕರ್ ಬಂಕ್ ಬಳಿ ನೂರಾರು ಜನರು, ಅಷ್ಟೇ ವಾಹನಗಳು ಕಂಡುಬಂದವು. ಸುಮಾರು 4,000 ಲೀಟರ್ ಡೀಸೆಲ್ ಬಂದಿತ್ತಾದರೂ ಕೇವಲ ಎರಡು ಮೂರು ತಾಸುಗಳಲ್ಲಿ ಖಾಲಿಯಾಯಿತು.

‘ರೈತರು, ಟ್ರ್ಯಾಕ್ಟರ್ಗಳ ಮಾಲೀಕರು ಕ್ಯಾನ್ಗಳನ್ನು ಹಿಡಿದು ಮುಗಿಬಿದ್ದಿದ್ದು ಸಾಮಾನ್ಯವಾಗಿತ್ತು. ತಲಾ 20 ಲೀಟರ್ಡೀಸೆಲ್ ಮಾತ್ರ ವಿತರಣೆ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೇವೆ. ಈಗ ಡೀಸೆಲ್ ಖಾಲಿಯಾದರೆ ಟ್ಯಾಂಕರ್ ಭರ್ತಿ ಮಾಡಿಸಿಕೊಳ್ಳುವುದಕ್ಕೂ ನಾವು ಫಿಲ್ಲಿಂಗ್ ಕೇಂದ್ರಗಳಲ್ಲಿ ಎರಡು ಮೂರುದಿನ ಸರದಿಯಲ್ಲಿ ನಿಲ್ಲಬೇಕು’ ಎಂದು ಬಂಕ್ ಮಾಲೀಕ ಅಡವಿರಾವ್ ತಿಕೋಟಿಕರ್ ‘ಪ್ರಜಾವಾಣಿ’ಗೆ ವಿವರಿಸಿದರು.

ಈ ಮಧ್ಯೆ ಬಹುತೇಕ ರೈತರು, ಟ್ರ್ಯಾಕ್ಟರ್ ಮಾಲೀಕರು ಡೀಸೆಲ್ ಅಭಾವ ಎದುರಾಗಲಿದೆ ಎಂದು ತಪ್ಪಾಗಿ ಊಹಿಸಿ ಹೆಚ್ಚುವರಿ ಕ್ಯಾನ್ಗಳನ್ನು ತಂದು ಡೀಸೆಲ್ ತುಂಬಿಸಿಕೊಳ್ಳುತ್ತಿದ್ದರು. ಸಮಸ್ಯೆ ಎಷ್ಟೊಂದು ತೀವ್ರವಾಗಿತ್ತೆಂದರೆ. ಸಮವಸ್ತ್ರದಲ್ಲಿದ್ದ ಒಬ್ಬ ಪೊಲೀಸ್ ತಮ್ಮವರಿಗಾಗಿ ಡೀಸೆಲ್ ತುಂಬಿಸಿಕೊಳ್ಳಲು ನೆರವಾಗಿದ್ದು ಕಂಡುಬಂದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-35-1977185670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.