ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಹನುಮಮಾಲಾ ವಿಸರ್ಜನೆ, ಭಕ್ತಾದಿಗಳಿಗಾಗಿ 50 ಸಾವಿರ ಲಾಡು ತಯಾರಿ

Last Updated 3 ಡಿಸೆಂಬರ್ 2022, 14:40 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ‌ಸೆಂಬರ್ 5ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆಗೆ ಬರುವ ಭಕ್ತಾದಿಗಳಿಗೆ ವಿತರಿಸಲು 50 ಸಾವಿರ ಲಾಡುಗಳನ್ನು ಸಿದ್ಧಪಡಿಸಲಾಗಿದೆ.

ಸುಮಾರು 1.5 ಲಕ್ಷ ಭಕ್ತರು ಬರುವ ನಿರೀಕ್ಷೆಯಿದ್ದು, ವಾರದಿಂದ ಲಾಡು ತಯಾರಿ ನಡೆದಿದೆ. 200 ಕ್ವಿಂಟಲ್ ಕಡಲೆಹಿಟ್ಟು, 40 ಕ್ವಿಂಟಲ್‌ ಸಕ್ಕರೆ, 120 ಡಬ್ಬಿ ಅಡುಗೆ ಎಣ್ಣೆ, 120 ಕೆಜಿ ಗೊಡಂಬಿ, 100 ಕೆಜಿ ದ್ರಾಕ್ಷಿ, 9 ಕೆಜಿ ಏಲಕ್ಕಿ ಬಳಸಿ ಲಾಡು ತಯಾರಿಸಲಾಗಿದೆ. 25 ಸಾವಿರ ತೀರ್ಥದ ಬಾಟಲ್ ಸಿದ್ಧವಾಗಿದೆ. 31 ಮಂದಿ ಲಾಡು ತಯಾರಿಸಿದ್ದಾರೆ.

‘ವೇದಪಾಠದ ಶಾಲೆಯ ಬಳಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಸೋಮವಾರ ಬೆಳಿಗ್ಗೆ 25 ಸಾವಿರ ಭಕ್ತರಿಗೆ ಸಿರಾ, ಉಪ್ಪಿಟ್ಟು ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸಾದ ವಿತರಣೆಯಲ್ಲಿ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಯೋಜನೆ ರೂಪಿಸಲಾಗಿದೆ’ ಎಂದು ಹನುಮಮಾಲಾ ಕಾರ್ಯಕ್ರಮದ ನೋಡಲ್‌ ಅಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT