ಕೊಪ್ಪಳ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (ಕೆಎಸ್ಬಿಸಿ) 23 ಸದಸ್ಯ ಸ್ಥಾನಗಳಿಗೆ ಆಯ್ಕೆಗೆ ಜಿಲ್ಲೆಯಲ್ಲಿಯೂ ಬುಧವಾರ ಸುಸೂತ್ರವಾಗಿ ಮತದಾನ ನಡೆದಿದೆ.

ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾದಲ್ಲಿ ಬೆಳಿಗ್ಗೆ 9.30ರಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಕೆಎಸ್ಬಿಸಿಯಲ್ಲಿ ಒಟ್ಟು 26 ಸ್ಥಾನಗಳು ಇದ್ದು ಇದರಲ್ಲಿ 23 ಸ್ಥಾನಕ್ಕೆ ಮಾತ್ರ ಸ್ಥಾನಕ್ಕೆ ವಕೀಲರು ಮತ ಹಾಕಬೇಕಿತ್ತು.

ಗಂಗಾವತಿಯಲ್ಲಿ ಒಟ್ಟು 492 ಮತದಾರರಿದ್ದು 434, ಕೊಪ್ಪಳದಲ್ಲಿ 492 ಮತದಾರರಲ್ಲಿ 440, ಯಲಬುರ್ಗಾದಲ್ಲಿ 113 ಒಟ್ಟು ಮತಗಳಲ್ಲಿ 107 ಮತ್ತು ಕುಷ್ಟಗಿ ವ್ಯಾಪ್ತಿಯಲ್ಲಿ ಒಟ್ಟು 179 ಮತಗಳಲ್ಲಿ 167 ಮತಗಳು ಚಲಾವಣೆಯಾದವು.

ಇತ್ತೀಚೆಗೆ ಎಐಸಿಸಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಖಿಲ ಭಾರತ ಕಾನೂನು ಮಾನವ ಹಕ್ಕುಗಳು ಹಾಗೂ ಆರ್ಟಿಐ ವಿಭಾಗ ರಾಷ್ಟ್ರೀಯ ಸಮಿತಿಗೆ ಹಿರಿಯ ಸದಸ್ಯರಾಗಿ ನೇಮಕವಾಗಿರುವ ಕೊಪ್ಪಳದ ಹಿರಿಯ ವಕೀಲ ಎಸ್. ಆಸೀಫ್ ಅಲಿ ಹಾಗೂ ಹಿರಿಯ ವಕೀಲೆ ಸಂಧ್ಯಾ ಮಾದಿನೂರು ಅವರು ಜಿಲ್ಲೆಯಿಂದ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.