ಮಾತೃಭಾಷೆ ಪ್ರೀತಿಸಿ: ಡಾ.ಶೇಖರಗೌಡ

7

ಮಾತೃಭಾಷೆ ಪ್ರೀತಿಸಿ: ಡಾ.ಶೇಖರಗೌಡ

Published:
Updated:
Deccan Herald

ಕುಷ್ಟಗಿ: ’ಕನ್ನಡಿಗರಾದ ನಾವು ಮೊದಲು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಅಂದರೆ ಮಾತ್ರ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯವಾಗುತ್ತದೆ‘ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಪ್ರತಿನಿಧಿ ಡಾ.ಶೇಖರಗೌಡ ಮಾಲಿಪಾಟೀಲ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ವತಿಯಿಂದ ತಾಲ್ಲೂಕಿನ ದೋಟಿಹಾಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಸಂಪರ್ಕಕ್ಕೆ ಅನ್ಯ ಭಾಷೆಗಳನ್ನು ಬಳಸುವುದು ಸರಿ. ಕನ್ನಡಿಗರು, ಅದರಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಪದಾಧಿಕಾರಿಗಳು ಶುದ್ಧವಾಗಿ ಕನ್ನಡವನ್ನು ಮಾತನಾಡುವುದು ಮತ್ತು ಬರವಣಿಗೆ ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಕನ್ನಡ ಅಂಕಿಗಳನ್ನು ಬರೆಯಲು ಪ್ರಯತ್ನಿಸುವ ಮೂಲಕ ಕನ್ನಡತನ ಮೆರೆಯಬೇಕು‘ ಎಂದರು.

ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ದತ್ತಿನಿಧಿ ದಾನಿಗಳ ಸಹಕಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ನಟರಾಜ ಸೋನಾರ, ಸಾಹಿತಿ ನಿಂಗಪ್ಪ ಸಜ್ಜನ ವಿವಿಧ ವಿಷಯಗಳ ಕುರಿತು ದತ್ತಿ ಉಪನ್ಯಾಸ ನೀಡಿದರು.

ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಶೇಖರಪ್ಪ ದೊಡ್ಡಮನಿ, ಹನುಮಂತರಾವ ದೇಸಾಯಿ, ರವೀಂದ್ರ ಬಾಕಳೆ, ಕುಮಾರಸ್ವಾಮಿ ಹಿರೇಮಠ, ಸಂಗಪ್ಪ ಕಡಿವಾಲ, ಆದಪ್ಪ ಸಾಲವಾಡಗಿ, ಗುರುಸಿದ್ದಯ್ಯ ಮಳಿಮಠ, ಶಿವಣ್ಣ ಮಸರಕಲ್ಲ, ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ಬಾಲಪ್ಪ ಸರೂರು, ಚೆನ್ನಬಸವ ಚೌರಿ, ಪರಸಪ್ಪ ಪಂಚಮ ಇತರರು ಇದ್ದರು.

ಫೆಬ್ರುವರಿ ತಿಂಗಳಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೋಟಿಹಾಳದಲ್ಲಿ ನಡೆಸಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !