ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ರಕ್ಷಕ ಮಡಿವಾಳ ಮಾಚಿದೇವ: ರೇಣುಕಾ ಕನಕಪ್ಪ ಮಡಿವಾಳರ

ಜಿಲ್ಲೆಯ ವಿವಿಧೆಡೆ ಮಾಚಿದೇವರ ಜಯಂತಿ ಆಚರಣೆ
Last Updated 2 ಫೆಬ್ರುವರಿ 2022, 3:31 IST
ಅಕ್ಷರ ಗಾತ್ರ

ಕೊಪ್ಪಳ: 'ಪ್ರತಿಯೊಬ್ಬರ ಸಹಕಾರದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಗ್ರಾಪಂ ಸದಸ್ಯೆ ರೇಣುಕಾ ಕನಕಪ್ಪ ಮಡಿವಾಳರ ಹೇಳಿದರು.

ಅವರು ಮಂಗಳವಾರ ತಳಕಲ್ ಗ್ರಾಮದ ಮಡಿವಾಳ ಮಾಚಿದೇವ ವೃತ್ತದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಸಮುದಾಯವು ಶೈಕ್ಷಣಿಕ, ಸಾಮಾಜಿಕ, ನೈತಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರು.

ಸಂಘದ ಅಧ್ಯಕ್ಷ ಪ್ರಕಾಶ ಬಸಪ್ಪ ಮಾತನಾಡಿದರು. ಸಮಾಜದ ಮುಖಂಡರಾದ ರಾಜೇಶ, ದೊಡ್ಡ ಪಕಿರೇಶ, ದೇವಪ್ಪ, ರಾಮಪ್ಪ, ಭೀಮಪ್ಪ, ಹನುಮಂತ, ಶಿವಪ್ಪ, ಜಗದೀಶ, ಮುದುಕಪ್ಪ, ನಿಂಗಪ್ಪ, ಮಲ್ಲಪ್ಪ ಇದ್ದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗ ಣದಲ್ಲಿ ಮಂಗಳವಾರ ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಹಾಗೂ ಜಿಪಂ ಸಿಇಒ ಬಿ.ಫೌಜಿಯ ತರುನ್ನುಮ್ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ವಸ್ತ್ರದ ಹಾಗೂ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಅಧ್ಯಕ್ಷ ದುರುಗೇಶ್ ಮಡಿವಾಳ, ನಾಗರಾಜ, ಹುಲುಗಪ್ಪ ಮಡಿವಾಳ, ಡಾ.ಸಂಗಮೇಶ ಕಲಹಾಳ ಇದ್ದರು.

‘ವಚನಗಳ ಹೆಚ್ಚಿನ ಅಧ್ಯಯನ ಅಗತ್ಯ’
ಯಲಬುರ್ಗಾ:
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಮಾತನಾಡಿ, ಶ್ರೀಗುರು ಮಡಿವಾಳ ಮಾಚಿದೇವ ಅವರ ವ್ಯಕ್ತಿತ್ವ ಹಾಗೂ ಅವರ ವಿಚಾರಧಾರೆಗಳು ಮಾನವ ಕುಲದ ಸಮಗ್ರ ಅಭಿವೃದ್ಧಿಗೆ ಪ್ರೇರಣೆ ನೀಡುವಂತವುಗಳಾಗಿವೆ. ಸಾಕಷ್ಟು ವಚನಗಳನ್ನು ರಚಿಸಿದ ಇವರ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕಾಗಿದೆ ಎಂದರು.

ಪ್ರೊ.ಎ.ಬಿ. ಕೆಂಚರಡ್ಡಿ, ಎಚ್.ಎನ್.ಗುಡಿಹಿಂದಿನ, ಮಂಜುಳಾ ಮಡಿವಾಳರ, ವೈ.ಬಿ.ಅಂಗಡಿ, ವಿರೇಶ ಗಜೇಂದ್ರಗಡ, ಮಾರ್ಕಂಡಯ್ಯ ಹಂದ್ರಾಳ, ಶಿವಲೀಲಾ ಇದ್ದರು.

ವಿವಿಧೆಡೆ ಮಾಚಿದೇವ ಜಯಂತಿ ಆಚರಣೆ
ತಾವರಗೇರಾ:
ಸ್ಥಳಿಯ ಸರ್ಕಾರಿ ಮತ್ತು ಅರೆ ಸಕಾರಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ನಬಿಸಾಬ್ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಪ್ರಲ್ಹಾದ ಜೋಷಿ, ಶರಣಬಸವರಾಜ, ಶ್ಯಾಮೂರ್ತಿ ಕಟ್ಟಿಮನಿ, ಮರೇಶ ನಾಯಕ, ಮತ್ತು ಮಡಿವಾಳ ಸಮಾಜದ ಮುಖಂಡರು ಇದ್ದರು.

ನಾಡ ಕಚೇರಿ ಕಾರ್ಯಾಲಯ: ಪಟ್ಟಣದ ನಾಡ ಕಚೇರಿಯಲ್ಲಿ ಮಂಗಳವಾರ ಶರಣ ಮಡಿವಾಳ ಮಾಚಿದೇವರ ಜಯಂತಿ ಯನ್ನು ಸರಳವಾಗಿ ಆಚರಿಸಲಾಯಿತು.

ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ ನಾಯಕ, ಸಿಬ್ಬಂದಿ ಶ್ರೀಶೈಲ, ಅನುರಾಧ,ರಫೀಕ ಮತ್ತು ಮಡಿವಾಳ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT