ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಚಿದೇವರ ಕಾಯಕನಿಷ್ಠೆ ಪಾಲಿಸಿ: ತಿಪ್ಪಣ್ಣ ಮಡಿವಾಳರ

Last Updated 2 ಫೆಬ್ರುವರಿ 2022, 3:26 IST
ಅಕ್ಷರ ಗಾತ್ರ

ಕನಕಗಿರಿ: 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶರಣರಾಗಿದ್ದ ಮಡಿವಾಳ ಮಾಚಿದೇವ ವಚನಗಳ ರಕ್ಷಕರಾಗಿದ್ದರು ಎಂದು ಮಡಿವಾಳ ಸಮಾಜದ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ಮಡಿವಾಳರ ತಿಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಚಿದೇವರ ನಡೆ, ನುಡಿ ಹಾಗೂ ಕಾಯಕ ನಿಷ್ಠೆಗೆ ಅವರು ಹೆಸರಾಗಿದ್ದರು ಎಂದು ಅವರು ಬಣ್ಣಿಸಿದರು.

ಬಿಜೆಪಿ ಮಂಡಲ ಮಹಾಂತೇಶ ಸಜ್ಜನ್, ಸಮಾಜದ ಮುಖಂಡ ಕೊಟ್ರೇಶ ಮಡಿವಾಳರ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶೇಷಪ್ಪ ಪೂಜಾರ, ಮಾಜಿ ಸದಸ್ಯ ಮಹ್ಮದ ಪಾಷ ಮುಲ್ಲಾರ, ಪ್ರಮುಖರಾದ ಮಂಜುನಾಥ ನಾಯಕ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ,ಹರೀಶ ಪೂಜಾರ, ವೆಂಕಟೇಶ ನೀರ್ಲೂಟಿ ಇದ್ದರು.

ಪಟ್ಟಣ ಪಂಚಾಯಿತಿ ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳಲ್ಲಿ ಮಡಿವಾಳ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT