ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪ ಸಿಂಗ್ ಜಯಂತಿ: ಅದ್ದೂರಿ ಆಚರಣೆಗೆ ನಿರ್ಧಾರ

Last Updated 28 ಏಪ್ರಿಲ್ 2022, 11:26 IST
ಅಕ್ಷರ ಗಾತ್ರ

ಕಾರಟಗಿ:‌ ಕೋವಿಡ್ ಕಾರಣ ಕಳೆದ ಎರಡು ವರ್ಷ ಸರಳವಾಗಿ ಆಚರಿಸಿದ ಮಹಾರಾಣಾ ಪ್ರತಾಪ ಸಿಂಗ್ ಜಯಂತಿಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ರಜಪೂತ ಮಹಾಸಭೆ ನಿರ್ಧರಿಸಿತು.

ಪಟ್ಟಣದಲ್ಲಿ ಈಚೆಗೆ ನಡೆದ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಹಲವು ಮುಖಂಡರು ಪಾಲ್ಗೊಂಡು ಒಮ್ಮತದ ತೀರ್ಮಾನ ತೆಗೆದುಕೊಂಡರು.

ಮಹಾಸಭಾದ ತಾಲ್ಲೂಕು ಘಟಕದ ಉಪಾಧ್ಯಕ್ಷ ಯಮನಸಿಂಗ್ ಮಾತನಾಡಿ, ಸಮಾಜದ ಬಾಂಧವರು ಅದ್ದೂರಿ ಕಾರ್ಯಕ್ರಮ ಆಯೋಜಿಸಿ, ಬಡವರಿಗೆ ನೆರವಾಗಬೇಕು. ಸಚಿವ ಆನಂದಸಿಂಗ್‌ ಸೇರಿದಂತೆ ರಾಜ್ಯ, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಹ್ವಾನಿಸಬೇಕು. ಕಾರ್ಯಕ್ರಮದ ಯಶಸ್ಸಿಗೆ ಯುವಕರು ಶ್ರಮಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಟಿ. ಶಂಕರಸಿಂಗ್ ಹಳೆಮನಿ, ಪ್ರಧಾನ ಕಾರ್ಯದರ್ಶಿ ವೆಂಕಟಸಿಂಗ್ ಎಲಿಗಾರ, ಸಹ ಕಾರ್ಯದರ್ಶಿ ದುರ್ಗಾಸಿಂಗ್, ಖಜಾಂಚಿ ರಾಮಸಿಂಗ್ ಗೋಡಿನಾಳ, ಮುಖಂಡರಾದ ರೂಪಸಿಂಗ್ ಹುನಗುಂದ, ಎಚ್.‌ ಚಾಂದಸಿಂಗ್‌, ಹನುಮಾನಸಿಂಗ್, ಬಾಲಾಜಿಸಿಂಗ್ ಮರ್ಲಾನಹಳ್ಳಿ, ವೆಂಕಟಸಿಂಗ್, ಭವಾನಿಸಿಂಗ್ ಗೋಡಿನಾಳ, ಅನೀಲ್‍ಸಿಂಗ್, ಪರುಶುರಾಮಸಿಂಗ್, ಶ್ಯಾಮಸಿಂಗ್, ತುಳಜಾರಾಮಸಿಂಗ್, ಧಾರಾಸಿಂಗ್, ಶಂಕರಸಿಂಗ್, ಅರುಣ್‍ಸಿಂಗ್, ಶಿವರಾಜಸಿಂಗ್, ವಿಜಯಸಿಂಗ್, ಪ್ರಶಾಂತಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT