ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಬ್‌ ಸದುಪಯೋಗ ಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Last Updated 27 ಜೂನ್ 2021, 3:37 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಮತ್ತು ಮೇಲಿಂದ ಮೇಲೆ ಲಾಕ್‌ಡೌನ್‌ ಆಗಿ ಶಾಲೆ, ಕಾಲೇಜುಗಳು ಬಂದ್‌ ಆಗಿವೆ. ಮುಂದೆ ಇದೇ ರೀತಿ ಶಾಲೆಗಳು ಬಂದ್‌ ಆದರೆ ಎಬಿಸಿಡಿಯಿಂದ ಕಲಿಯಬೇಕಾಗುತ್ತದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ತಾಲ್ಲೂಕಿನಹೊಸಬಂಡಿ ಹರ್ಲಾಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣೆ ಮತ್ತು ಐ.ಸಿ.ಐ ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಶಿಕ್ಷಣದಿಂದ ಯಾವ ಒಬ್ಬ ವಿದ್ಯಾರ್ಥಿ ವಂಚಿತರಾಗಬಾಗಬಾರದು ಎಂದು ಮನೆಯಲ್ಲಿ ವೈಜ್ಞಾನಿಕವಾಗಿ ವಿದ್ಯಾಭ್ಯಾಸ ಮಾಡಲು, ಅನೇಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿಶ್ವದಲ್ಲಿ ಏನೇಯಾದರೂ ಕೆಲವೇ ಕ್ಷಣದಲ್ಲಿ ತಿಳಿಯಲು ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸಲು ಈ ಟ್ಯಾಬ್‌ಗಳನ್ನು ನೀಡಲಾಗುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು, ಸದುಪಯೋಗ ಪಡಿದುಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನಪ್ರಾಚಾರ್ಯ ಡಾ.ನಿಂಗಪ್ಪ ಕಂಬಳಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು. ಗ್ರಾಮದ ಮುಖಂಡರಾದ ಕೆ.ಚಂದ್ರಶೇಖರ್, ಐ.ಎಲ್.ಸಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೃಷ್ಣ ಗೊಲ್ಲರ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ, ದೇವಪ್ಪ ಮೆಕಾಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ರಫಿ, ರಂಗಪ್ಪ, ಮುಖಂಡರಾದ ಕಾಶಯ್ಯಸ್ವಾಮಿ, ವೆಂಕಟೇಶ, ಅಂಜಿ ಆಲಮಟ್ಟಿ ಸೇರಿದಂತೆ ಅನೇಕರು ಇದ್ದರು.

ರಾಮಣ್ಣ ಉಪ್ಪಾರ ಅವರು ನಿರೂಪಿಸಿದರು. ಅನ್ನಪೂರ್ಣ ಪಂಥರ ಸ್ವಾಗತಿಸಿದರು. ಗೋಪಾಲ.ಡಿ ಅವರು
ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT