‘ಬಿಜೆಪಿ ಜೊತೆ ಹೊಂದಾಣಿಕೆ; ತಾಕತ್ತಿದ್ದರೆ ಸಾಬೀತು ಮಾಡಲಿ’

7

‘ಬಿಜೆಪಿ ಜೊತೆ ಹೊಂದಾಣಿಕೆ; ತಾಕತ್ತಿದ್ದರೆ ಸಾಬೀತು ಮಾಡಲಿ’

Published:
Updated:

ಗಂಗಾವತಿ: ‘ಬಿಜೆಪಿಯ ಇನ್ನೊಂದು ಮುಖ ಜೆಡಿಎಸ್ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಅವರಿಗೆ ತಾಕತ್ತಿದದ್ದರೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರ ಸಾಕ್ಷ್ಯ ನೀಡಲಿ’ ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ರಾಘವೇಂದ್ರ ಗಂಗಾವತಿ ಸವಾಲು ಹಾಕಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಕ್ಬಾಲ್ ಅನ್ಸಾರಿ ಎಂಥ ರಾಜಕಾರಣಿ ಎಂದು ಜನರಿಗೆ ಗೊತ್ತು. ಸುಳ್ಳನ್ನು ಸತ್ಯವಾಗಿಸುವ, ಸತ್ಯವನ್ನು ಸುಳ್ಳೆಂದು ಬಹಳ ಸರಳವಾಗಿ ನಂಬಿಸುವ ವ್ಯಕ್ತಿ. ಈಗ ಜೆಡಿಎಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದವು’ ಎಂದರು.

‘ಸ್ಥಳೀಯ ಜೆಡಿಎಸ್ ಮುಖಂಡರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರ ಅಥವಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಒಂದು ಸಾಕ್ಷ್ಯವನ್ನಾದರೂ ಅನ್ಸಾರಿ ತೋರಿಸಿದರೆ, ಅಂಥ ಮುಖಂಡರ ಮೇಲೆ ಶಿಸ್ತು ಕ್ರಮಕ್ಕೆ ವರೀಷ್ಠರಿಗೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ವಿಧಾನಸಭೆ, ಲೋಕಸಭೆ ಅಥವಾ ಸ್ಥಳೀಯ ಹಂತದ ಚುನಾವಣೆ ಇರಲಿ, ಹೊಂದಾಣಿಕೆ ಮೂಲಕ ರಾಜಕೀಯ ಮಾಡಬೇಕೋ ಅಥವಾ ಸ್ವತಂತ್ರವಾಗಿ ಸೆಣೆಸಬೇಕೋ ಎಂಬುವುದನ್ನು ಪಕ್ಷದ ವರಿಷ್ಠ ದೇವೇಗೌಡ ಅವರು ನಿರ್ಣಯ ಕೈಗೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದರು.

‘ಯಾರೇ ಆಗಿರಲಿ ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ. ತೀವ್ರವಾಗಿ ಖಂಡಿಸುತ್ತೇವೆ. ಸಮಯ ಬಂದರೆ ಅಂಥಹ ಮುಖಂಡರಿಗೆ ತಕ್ಕ ಪಾಠವನ್ನೂ ಕಲಿಸುತ್ತೇವೆ’ ಎಂದು ರಾಘವೇಂದ್ರ ಗುಡುಗಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !