ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಜಿಲ್ಲಾ ಸಮಿತಿ ರಚನೆಗೆ ಆ. 31ರಂದು ಸಭೆ: ಕರಿಯಪ್ಪ ಗುಡಿಮನಿ

Published : 29 ಆಗಸ್ಟ್ 2024, 4:44 IST
Last Updated : 29 ಆಗಸ್ಟ್ 2024, 4:44 IST
ಫಾಲೋ ಮಾಡಿ
Comments

ಕೊಪ್ಪಳ: ‘ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಘಟನೆಗಳು ಹೆಚ್ಚಾಗುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಲು ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ಸಮಾನತೆ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಆ. 31ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವೇದಿಕೆಯ ಜಿಲ್ಲಾ ಸಮಿತಿ ರಚನೆ ಮಾಡಲಾಗುವುದು’ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇತ್ತೀಚೆಗೆ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಕ್ಷೌರ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ ಯುವಕ ಕೊಲೆಗೀಡಾಗಿದ್ದಾನೆ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಇವುಗಳನ್ನು ತಪ್ಪಿಸಲು ಸಮಿತಿ ಆರಂಭಿಸಲಾಗುವುದು.’ ಎಂದರು.

‘ಶೋಷಿತ ಮಾದಿಗ ಸಮುದಾಯದ ಜನರ ಮೇಲೆ ಹಲ್ಲೆಯಾಗುತ್ತಿದ್ದು, ಇದೆಲ್ಲ ತೊಡೆದು ಹಾಕಿ ಸೌಹಾರ್ದತೆ ನಿರ್ಮಾಣಕ್ಕಾಗಿ ಅಭಿಯಾನ ನಡೆಸಲಾಗುವುದು. ಆದ್ದರಿಂದ ಸಮಾನತೆಯಲ್ಲಿ ನಂಬಿಕೆ ಹೊಂದಿರುವವರು ಅಂದಿನ ಸಭೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ವಿರೂಪಾಕ್ಷ ಯಡಿಯೂರಪುರ, ಹುಲುಗಪ್ಪ ಹ್ಯಾಟಿ, ಮುದುಕಪ್ಪ ಹೊಸಮನಿ, ಯಮನೂರಪ್ಪ ಮುದ್ದಾಬಳ್ಳಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT