ಸೋಮವಾರ, ಡಿಸೆಂಬರ್ 16, 2019
18 °C

ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ತಾಲ್ಲೂಕಿನ ಗಿಣಿಗೇರಿ ಸಮೀಪದ ಹೊಸಕನಕಾಪುರ ಗ್ರಾಮ ದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯತ್ತಿದ್ದು, ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಗ್ರಾಮದಲ್ಲಿ ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಬೆಳಿಗ್ಗೆಯೇ ಮದ್ಯಪಾನ ಮಾಡಿ ಬರುತ್ತಾರೆ. ಅಲ್ಲದೆ ಯಾವುದೇ ಕಡಿವಾಣ ಇಲ್ಲದೆ ಇರುವುದರಿಂದ ಮನೆ ಗಳಲ್ಲಿ ವಾತಾವರಣ ಹಾಳಾಗುತ್ತಿದ್ದು, ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮದ ಮಹಿಳೆಯರು ಗೋಳು ತೋಡಿಕೊಂಡರು.

ಸಂಬಂಧಿಸಿದ ಅಬಕಾರಿ ಇಲಾಖೆ ಉಪ ಆಯುಕ್ತರಿಗೂ ಮನವಿ ಸಲ್ಲಿಸಿ ತಕ್ಷಣವೇ ಗ್ರಾಮದಲ್ಲಿ ಸಂಪೂರ್ಣ ಮದ್ಯಪಾನ ನಿಲುಗಡೆಗೊಳಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಬಸವರಾಜ ಶೀಲವಂತರ, ರಾಮಣ್ಣ ಬಿ ಶೆಟ್ಟಿ, ಬಸವರಾಜ ಅಗಸರ, ಮಂಜುನಾಥ ಕಂಪಸಾಗರ, ನಾಗರಾಜ ತಳವಾರ, ಆನಂದ ಮೂರಮನಿ, ತಾಜುದ್ದೀನ್ ಹೊಸಮನಿ, ಮಂಜುಳಾ, ಈರಮ್ಮ, ಗೀತಾ, ಶಾಂತಮ್ಮ, ಸಾವಿತ್ರಿ, ಶಹನಾಜ್ ಬಿ, ಪ್ರೇಮ, ಹುಚ್ಚಮ್ಮ, ಕಸ್ತೂರಿ ಈ ವೇಳೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)