ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಹಣ ನೀಡಲು ಒತ್ತಾಯ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ
Last Updated 22 ಫೆಬ್ರುವರಿ 2021, 13:28 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುನ್ನಳ್ಳಿ, ಹೊರತಟ್ನಾಳ, ಮಂಗಳಾಪುರ ಗ್ರಾಮಗಳ ಕೂಲಿಕಾರರು ಕೆಲಸಕ್ಕೆ ಅರ್ಜಿ ಸಲ್ಲಿಸಿ ಸುಮಾರು 23 ದಿನಗಳಾದರೂ ಕೆಲಸದ ಪಟ್ಟಿ ನೀಡಿಲ್ಲ. ಇನ್ನೂ ಕೆಲವರಿಗೆ ಕೂಲಿ ಹಣ ನೀಡಿಲ್ಲ ಎಂದು ಆರೋಪಿಸಿಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಕ್ಷಣ ಕೆಲಸದ ಪಟ್ಟಿ ನೀಡಬೇಕು. ಬಾಕಿ ಕೂಲಿ ಪಾವತಿಮಾಡಬೇಕು. ಪಿಡಿಒಗಳ ಕಿರುಕುಳ ತಪ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಕೂಲಿ ಹಣವನ್ನು ಆದಷ್ಟು ಬೇಗ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸುಂಕಪ್ಪ ಗದಗ,ಅಂದಪ್ಪ ಬರದೂರ, ಉಸ್ಮಾನ್ ಕರಡಿ, ಹಸನ್‌ಸಾಬ್‌ ಕರಡಿ, ಫಕೀರಮ್ಮ ಗೌರಿಪುರ, ಪಾರಮ್ಯ ಗದ್ದಿ, ಶಶಿಕಲಾ ಇಟಗಿ, ಶಾಂತಮ್ಮ ಹಳ್ಳಿ, ಪದ್ಮವ್ವ ಹಳ್ಳಿ, ಶಿವಮ್ಮ , ಪ್ರಮಿಳಾ ಇಟಗಿ, ದ್ಯಾಮವ್ಯ ಹಿಟ್ನಾಳ, ಹುಸೇನ್ ಸಾಬ್ ನದಾಫ, ಹುಲುಗಪ್ಪ ಗೋಕಾವಿ, ಅಮರವ್ವ ಗದಗ, ಫಕೀರಸಾಬ್ ಮುಜಾವಾರ್ ಹಾಗೂ ಗ್ಯಾನವ್ಯ ಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT