ಕೊಪ್ಪಳ: ‘ಮೋದಿ ಸಾಹೇಬರಿಗೆ ವಿರೋಧ ಪಕ್ಷವಿಲ್ಲದ ಭಾರತ ಬೇಕು, ಹೆಂಡತಿ ಇಲ್ಲದ ಜೀವನ ಬೇಕು, ಮಕ್ಕಳಿಲ್ಲದ ಅಂಗಳ ಬೇಕು, ಪ್ರಶ್ನೆಗಳಿಲ್ಲದ ಸಂಸತ್ ಬೇಕು, ಏನನ್ನೂ ಕೇಳದ ಮಾಧ್ಯಮಗಳು ಬೇಕು, ಅಡಿಟ್ ಇಲ್ಲದ ಹಣ ಬೇಕು, ಬುದ್ದಿ ಇಲ್ಲದ ಭಕ್ತರು ಬೇಕು...‘

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ ಹೀಗೆ ಕವನ ವಾಚಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು ’ಮೋದಿ ತಾವು ಅಧಿಕಾರಕ್ಕೆ ಬಂದ ದಿನದಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ’ ಎಂದರು.

ಸಾಂಸ್ಕೃತಿಕ ನೀತಿ: ‘ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ತರಲು ಸಭೆ ಮಾಡಲಾಗಿದ್ದು, ಅದರಲ್ಲಿ ಉತ್ಸವ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕಲಾವಿದರಿಗೆ ಅವಕಾಶಗಳ ಕುರಿತೂ ಮಾನದಂಡ ರೂಪಿಸಲಾಗಿದೆ’ ಎಂದರು.

‘ಪ್ರಚಾರದ ಹಂಬಲಕ್ಕಾಗಿ ನಟ ಚೇತನ್ ಅಹಿಂಸಾ ಮೇರು ನಟ ರಾಜ್ಕುಮಾರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ರಾಜಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ ಆತನಿಗೆ ಇದೆಯೇ? ರಾಜಕುಮಾರ್ಗೆ ಹತ್ತು ಎಕರೆ ಭೂಮಿ ಕೊಟ್ಟರೂ ಕಡಿಮೆಯೇ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.