ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ದೇವಸ್ಥಾನ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯಡಿ ವಶಪಡಿಸಿಕೊಳ್ಳಲು ಉದ್ದೇಶಿಸಲಾದ ರೈತರ ಭೂಮಿಯನ್ನು ಶಾಸಕ ಜಿ.ಜನಾರ್ದನರೆಡ್ಡಿ ಭಾನುವಾರ ವೀಕ್ಷಣೆ ಮಾಡಿದ್ದರು.
ನಂತರ ಮಾತನಾಡಿ, ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು 72 ಎಕರೆ ಭೂಮಿ ಅವಶ್ಯವಿದ್ದು, ರೈತರಿಗೆ ಅಗತ್ಯ ಸೂಕ್ತ ಪರಿಹಾರ ಧನ ಒದಗಿಸಿ ಭೂಮಿಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ಅಂಜನಾದ್ರಿ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಅಂಜನಾದ್ರಿ ಬಳಿಯ 72 ಎಕರೆ ಭೂಮಿ ಬಳಸಿ ಯಾತ್ರೆನಿವಾಸ, ಭಕ್ತರಿಗೆ ವಸತಿ ನಿಲಯ, ಪ್ರಸಾದ ನಿಲಯ, ಪಾರ್ಕಿಂಗ್ ವ್ಯವಸ್ಥೆ, ರೋಪ್ ವೇ, ಶೌಚಾಲಯ, ಪ್ರದಕ್ಷಿಣಾ ಪಥ, ರಸ್ತೆ ವಿಸ್ತರಣೆ ಸೇರಿ ಹಲವು ಮೂಲಸೌಕರ್ಯಗಳು ಕಲ್ಪಿಸಲು ಇಂದು ಭೇಟಿ ನೀಡಲಾಗಿದೆ ಎಂದರು.
ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜ ನಾದ್ರಿ ದೇವಸ್ಥಾನ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯ ಡಿ ವಶಪಡಿಸಿಕೊಳ್ಳಲು ಉದ್ದೇಶಿಸಲಾದ ರೈತರ ಭೂಮಿಗಳ ನ್ನ ಶಾಸಕ ಜಿ.ಜನಾರ್ದನರೆಡ್ಡಿ ಭಾನುವಾರ ವೀಕ್ಷಣೆ ಮಾಡಿ ದರು.